alex Certify
ಕನ್ನಡ ದುನಿಯಾ       Mobile App
       

Kannada Duniya

ಓಂಪುರಿ ಸಾವಿಗೂ ಮುನ್ನ ನಡೆದಿದ್ದೇನು ಗೊತ್ತಾ…?

om-puri-inner

ಪ್ರತಿಭಾವಂತ ನಟ ಓಂಪುರಿ ಅವರ ನಿಧನ ಕೇವಲ ಬಾಲಿವುಡ್ ಗೆ ಮಾತ್ರವಲ್ಲ ಇಡೀ ದೇಶಕ್ಕೇ ದೊಡ್ಡ ಆಘಾತ. ಓಂಪುರಿ ಅವರ ಸಾವಿನ ಸುತ್ತ ಅನುಮಾನದ ಹುತ್ತ ಕೂಡ ಬೆಳೆದಿದೆ. ಅವರದ್ದು ಸಹಜ ಸಾವಲ್ಲ ಎಂಬ ಶಂಕೆ ಮೂಡಿದೆ. ಆದ್ರೆ ಪೊಲೀಸರು ಮಾತ್ರ ಇದನ್ನೆಲ್ಲ ಅಲ್ಲಗಳೆಯುತ್ತಿದ್ದಾರೆ.

ಅಷ್ಟಕ್ಕೂ ಓಂಪುರಿ ಸಾವಿಗೂ ಮುನ್ನಾ ದಿನ ರಾತ್ರಿ ಏನು ನಡೀತು ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಕಾರು ಚಾಲಕ ಹಾಗೂ ಅವರ ಸ್ನೇಹಿತ ಖಾಲಿದ್ ಕಿದ್ವೈ, ಆ ರಾತ್ರಿ ನಡೆದ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. ಸಾವಿಗೂ ಮುನ್ನ ನಡೆದಿದ್ದೇನು ಅನ್ನೋ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

ಗುರುವಾರ ಸಂಜೆ ಓಂಪುರಿ ತಮ್ಮ ಮಗನನ್ನು ಭೇಟಿ ಮಾಡೋಕೆ ಅಂತಾ ಮಾಜಿ ಪತ್ನಿ ನಂದಿತಾರ ಫ್ಲಾಟ್ ಗೆ ಬಂದಿದ್ರು. ಆದ್ರೆ ನಂದಿತಾ ಹಾಗೂ ಮಗ ಇಬ್ಬರೂ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಹೊರಟು ಹೋಗಿದ್ರು. ನಂದಿತಾಗೆ ಕರೆ ಮಾಡಿದ ಓಂಪುರಿ ಮಗನನ್ನು ಭೇಟಿ ಮಾಡಬೇಕು, ಬೇಗ ಮನೆಗೆ ಬನ್ನಿ ಅಂತಾ ಹೇಳಿದ್ದಾರೆ. ಇಬ್ಬರ ಮಧ್ಯೆ ಫೋನ್ ನಲ್ಲೇ ಮಾತಿನ ಚಕಮಕಿ ನಡೆದಿತ್ತು.

ಕೊನೆಗೆ ಒಂದು ಪೆಗ್ ಮದ್ಯ ಹೀರುತ್ತಾ ಕುಳಿತ ಓಂಪುರಿ 45 ನಿಮಿಷಗಳ ಕಾಲ ನಂದಿತಾ ಫ್ಲಾಟ್ ನಲ್ಲೇ ಮಗನಿಗಾಗಿ ಕಾಯುತ್ತಿದ್ರು. ಅವರು ಬರದೇ ಇದ್ದಿದ್ರಿಂದ ಬೇಸರಗೊಂಡ ಓಂಪುರಿ ಕಾರಿನಲ್ಲಿ ಕುಳಿತು ಬಾಟಲಿಯಲ್ಲಿದ್ದ ಮದ್ಯವನ್ನು ಪೂರ್ತಿ ಕುಡಿದು ಖಾಲಿ ಮಾಡಿದ್ರು. ನಂತರ ಮನೆಗೆ ಮರಳಿದ್ದಾರೆ. ಆ ರಾತ್ರಿ  ಕಳೆದು ಬೆಳಗಾಗುವಷ್ಟರಲ್ಲಿ ಓಂಪುರಿ ಇಹಲೋಕ ತ್ಯಜಿಸಿದ್ದರು. ಜನವರಿ 6 ರಂದು ಬೆಳಗ್ಗೆ ತೀವ್ರ ಹೃದಯಾಘಾತದಿಂದ ಓಂಪುರಿ ಸಾವನ್ನಪ್ಪಿದ್ದಾರೆ. ಆದ್ರೆ ಅವರ ಸಾವಿನ ಹಿಂದೆ ಕಾಣದ ಕೈಗಳಿರಬಹುದು ಅನ್ನೋ ಅನುಮಾನವೂ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...