alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯರಾತ್ರಿ ‘ಬಿಗ್ ಬಾಸ್’ ಮನೆಗೆ ಬಂದ ಹೊಸ ಅತಿಥಿ

om-prakash

‘ಬಿಗ್ ಬಾಸ್’ ಸೀಸನ್ 4 ರಲ್ಲಿ ಮೊದಲ ವಾರ ಮನೆಯಿಂದ ನಟಿ ವಾಣಿಶ್ರೀ ಹೊರಬಂದಿದ್ದಾರೆ. ಈ ಸಂದರ್ಭದಲ್ಲಿ 15 ಮಂದಿ ಇದ್ದ ಸದಸ್ಯರ ಸಂಖ್ಯೆ 14 ಕ್ಕೆ ಇಳಿದಿದೆ.

ಆದರೆ, ರಾತ್ರಿ 12 ಗಂಟೆ ಸುಮಾರಿಗೆ ಮನೆಯ ಸದಸ್ಯರೆಲ್ಲಾ ಮಲಗಿದ್ದ ವೇಳೆಯಲ್ಲಿ ಇದ್ದಕ್ಕಿದ್ದಂತೆ ‘ಬಂತು ಬಂತು ಕರೆಂಟು ಬಂತು’ ಹಾಡು ಕೇಳಿ ಬಂತು. ಪ್ರಥಮ್ ಹೊರತುಪಡಿಸಿ ಎಲ್ಲರೂ ಮಧ್ಯರಾತ್ರಿಯಲ್ಲಿ ಹಾಡು ಕೇಳಿ ಬಂದ ಬಗ್ಗೆ ಆಶ್ಚರ್ಯದಿಂದ ಮನೆಯ ಹೊರಗೆ ಬಂದು ನೋಡಿದರೆ, ಹಿಂಬದಿ ಬಾಗಿಲ ಮೂಲಕ ಖ್ಯಾತ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಮನೆಯೊಳಗೆ ಬಂದು ಮಲಗಿದ್ದರು.

ಹಾಡು ಮುಗಿದ ನಂತರ ಸದಸ್ಯರೆಲ್ಲಾ ಮನೆಯೊಳಗೆ ಮಲಗಲು ಬಂದಾಗ ಓಂ ಪ್ರಕಾಶ್ ಅವರ ದರ್ಶನವಾಯಿತು. ಎಲ್ಲರೂ ಅವರನ್ನು ಸ್ವಾಗತಿಸಿದರು. ಮತ್ತೆ ಮನೆಯ ಸದಸ್ಯರ ಸಂಖ್ಯೆ 15 ಕ್ಕೇರಿದೆ. ಓಂ ಪ್ರಕಾಶ್ ಅತಿಥಿಯಾಗಿ ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...