alex Certify
ಕನ್ನಡ ದುನಿಯಾ       Mobile App
       

Kannada Duniya

‘ಚಾಲೆಂಜಿಂಗ್ ಸ್ಟಾರ್’ ಅಭಿಮಾನಿಗಳಿಗೊಂದು ಸಿಹಿ ಸುದ್ದಿ

ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಫುಲ್ ಬ್ಯುಸಿ. ಸಾಲು, ಸಾಲು ಸಿನಿಮಾಗಳಲ್ಲಿ ದರ್ಶನ್ ಅಭಿನಯಿಸುತ್ತಿದ್ದಾರೆ. ದರ್ಶನ್ ರ 50ನೇ ಚಿತ್ರ ಕುರುಕ್ಷೇತ್ರ ಬಿಡುಗಡೆಗೆ ರೆಡಿಯಾಗಿದ್ದು, ಯಜಮಾನ ಚಿತ್ರದ ಎರಡು ಹಾಡುಗಳ ಶೂಟಿಂಗ್ ಉಳಿದಿದೆ. ಈ ಮಧ್ಯೆ ಸೆಪ್ಟಂಬರ್ 10 ರಿಂದ ದರ್ಶನ್ ಅಭಿನಯದ ‘ಒಡೆಯ’ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

ತರುಣ್ ಶ್ರೀಧರ್ ನಿರ್ದೇಶನದ ಒಡೆಯ ಸಿನಿಮಾವನ್ನು ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ನಾಯಕಿ ಯಾರು ಎಂಬುದು ಇನ್ನೂ ಫೈನಲ್ ಆಗಿಲ್ಲ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತವಿದೆ. ಒಡೆಯ ಚಿತ್ರದಲ್ಲಿ ದರ್ಶನ್ ರೊಂದಿಗೆ ಎಸ್. ನಾರಾಯಣ್ ಪುತ್ರ ಸಹೋದರನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಯಜಮಾನ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಮಂಗಳವಾರ ಮುಕ್ತಾಯವಾಗಿದ್ದು, ಇನ್ನೆರಡು ಹಾಡುಗಳನ್ನು ಅಕ್ಟೋಬರ್ ನಲ್ಲಿ ಶೂಟ್ ಮಾಡುವ ಇರಾದೆಯನ್ನು ಚಿತ್ರ ತಂಡ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...