alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ವಿದ್ಯಾ ಬಾಲನ್ ಗೆ ಸಿಕ್ಕಿರುವ ಗಿಫ್ಟ್ ಏನು ಗೊತ್ತಾ?

ಬಾಲಿವುಡ್‌ ನಟಿ ವಿದ್ಯಾಬಾಲನ್‌ ಗೆ ಅಂದದ ಸೀರೆಯೊಂದು ಉಡುಗೊರೆಯಾಗಿ ಸಿಕ್ಕಿದೆ. ಟಾಲಿವುಡ್‌ ನಲ್ಲಿ ಎನ್‌.ಟಿ.ಆರ್‌. ಎಂದೇ ಪ್ರಸಿದ್ಧರಾಗಿರುವ ದಿವಂಗತ ನಟ ನಂದಮೂರಿ ತಾರಕ ರಾಮರಾವ್‌ ಅವರ ಕುರಿತ ಚಿತ್ರದಲ್ಲಿ ವಿದ್ಯಾಬಾಲನ್ ನಟಿಸಲಿದ್ದಾರೆ.

ಇತ್ತೀಚೆಗೆ ಸಿನಿಮಾದ ಚಿತ್ರೀಕರಣಕ್ಕಾಗಿ ಹೈದರಾಬಾದ್‌ಗೆ ಆಗಮಿಸಿದ್ದ ವಿದ್ಯಾಬಾಲನ್‌ ಅವರಿಗೆ ಎನ್‌.ಟಿ.ಆರ್‌. ಕುಟುಂಬದಿಂದ ಆತ್ಮೀಯ ಸ್ವಾಗತ ಸಿಕ್ಕಿದ್ದಲ್ಲದೆ, ಸೀರೆ ಉಡುಗೊರೆಯಾಗಿ ನೀಡಿದ್ದಾರೆ.

ನಂದಮೂರಿ ಬಾಲಕೃಷ್ಣ, ಲೋಕೇಶ್ವರಿ, ವಸುಂಧರಾ ದೇವಿ, ತೇಜಸ್ವಿನಿ ಹಾಗೂ ಭರತ್‌ ವಿದ್ಯಾಬಾಲನ್‌ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ, ಸತ್ಕರಿಸಿದ್ದಾರೆ.

ಚಿತ್ರದಲ್ಲಿ ವಿದ್ಯಾಬಾಲನ್‌ ಅವರು 1985 ರಲ್ಲಿ ಕ್ಯಾನ್ಸರ್‌ ನಿಂದ ನಿಧನರಾದ ಎನ್‌.ಟಿ.ಆರ್‌. ಅವರ ಮೊದಲ ಪತ್ನಿ ಪಾತ್ರವನ್ನು ನಿರ್ವಹಿಸಲಿದ್ದಾರೆ. 2019 ರಲ್ಲಿ ಚಿತ್ರ ತೆರೆಕಾಣಲಿದೆ. ಕೇವಲ ನಟನಾಗಿ ಮಾತ್ರವಲ್ಲದೆ ಎನ್‌.ಟಿ.ಆರ್‌. 3 ಬಾರಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿಯೂ ಜನರ ಸೇವೆ ಸಲ್ಲಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...