alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಚ್ಚು ಹಚ್ಚಿದ ‘ನೋಟಾ’ 4 ದಿನಗಳಲ್ಲಿ ಗಳಿಸಿದ್ದೆಷ್ಟು ಗೊತ್ತಾ…?

ವಿಜಯ ದೇವರಕೊಂಡ ಅಭಿನಯದ ರಾಜಕೀಯ ಥ್ರಿಲ್ಲರ್ ಚಿತ್ರ ‘ನೋಟಾ’ ಈಗ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.

ತೆಲುಗು ಚಿತ್ರರಂಗದಲ್ಲಿ ಸತತ ಹಿಟ್ ಚಿತ್ರ ನೀಡಿರುವ ವಿಜಯ ದೇವರಕೊಂಡ ಅಭಿನಯದ ಚೊಚ್ಚಲ ತಮಿಳು ಚಿತ್ರ ಇದಾಗಿದ್ದು, ತಮಿಳು ಮತ್ತು ತೆಲುಗು ಭಾಷಿಗರು ಹೆಚ್ಚಿರುವ ಪ್ರದೇಶದಲ್ಲಿ ಅಭಿಯಾನಿ ವಲಯವನ್ನೇ ಸೃಷ್ಟಿಸಿಕೊಂಡಿದ್ದಾರೆ. ಆನಂದ್ ಶಂಕರ್ ನಿರ್ದೇಶನದ ನೋಟಾ ಚಿತ್ರವು ಅ.5 ರಂದು ಬಿಡುಗಡೆಯಾಗಿತ್ತು.

ಬಿಡುಗಡೆಗೊಂಡ ಮೊದಲ ದಿನವೇ ದಾಖಲೆ ವ್ಯವಹಾರ ಮಾಡಿತ್ತು. ಚಿತ್ರರಂಗದ ವಿಶ್ಲೇಷಕರ ಪ್ರಕಾರ ಈವರೆಗೆ ವಿಶ್ವಾದ್ಯಂತ ಪ್ರದರ್ಶನ ಕಂಡು 14 ಕೋಟಿ ವ್ಯವಹಾರ ಮಾಡಿದೆ.

ನೋಟಾ ದ್ವಿಭಾಷಾ ಚಿತ್ರ ಎಂದೇ ಪ್ರಮೋಟ್ ಮಾಡಲಾಗಿತ್ತಾದರೂ, ತೆಲುಗು ಭಾಷೆಗೆ ಡಬ್ ಮಾಡಲಾಗಿತ್ತು. ಆದರೂ ಆಂಧ್ರ ಮತ್ತು ತೆಲಂಗಾಣ ಭಾಗದಲ್ಲಿ ಚಿತ್ರ 4.60 ಕೋಟಿ ರೂ. ಸಂಗ್ರಹಿಸಿದೆ. ತೆಲುಗು ಮತ್ತು ತಮಿಳು ಎರಡೂ ಭಾಷೆಗಳನ್ನು ಮಾತನಾಡುವವರು ಹೆಚ್ಚಿರುವ ಕಡೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಂದಾಜು 25 ಕೋಟಿ ಹೂಡಿಕೆಯ ಈ ಚಿತ್ರ ಒಂದು ವಾರದೊಳಗೆ ಲಾಭಕ್ಕೆ ಬರಬಹುದೆಂಬ ಅಂದಾಜಿದೆ. ಚಿತ್ರ ವಿಮರ್ಶಕರ ಪ್ರಕಾರ ನೋಟಾ ಒಂದು ಹಿಟ್ ಫಿಲಂ ಎಂದು ಘೋಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...