alex Certify
ಕನ್ನಡ ದುನಿಯಾ       Mobile App
       

Kannada Duniya

ರಿಸೆಪ್ಷನ್ ನಲ್ಲಿ ವಿರುಷ್ಕಾ ಜೋಡಿಯ ಡಾನ್ಸ್ ಧಮಾಕಾ

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ವಿದೇಶದಲ್ಲಿ ಸಪ್ತಪದಿ ತುಳಿದಿದ್ದಕ್ಕೆ ಬಿಜೆಪಿ ಶಾಸಕರೊಬ್ರು ಆಕ್ಷೇಪ ವ್ಯಕ್ತಪಡಿಸಿದ್ರು. ಆದ್ರೆ ವಿರುಷ್ಕಾ ಭಾರತದ ಸಂಪ್ರದಾಯದ ಬಗ್ಗೆ ಎಷ್ಟು ಗೌರವ ಹೊಂದಿದ್ದಾರೆ ಅನ್ನೋದಕ್ಕೆ ದೆಹಲಿಯಲ್ಲಿ ನಡೆದ ರಿಸೆಪ್ಷನ್ ಸಾಕ್ಷಿಯಾಗಿದೆ.

ತಾವಿಬ್ಬರೂ ಭಾರತೀಯರು ಅನ್ನೋದನ್ನು ಈ ಜೋಡಿ ಸಾಬೀತು ಮಾಡಿದ್ದಾರೆ. ನಿನ್ನೆ ನಡೆದ ಅದ್ಧೂರಿ ರಿಸೆಪ್ಷನ್ ನ ಕೆಲವು ವಿಡಿಯೋಗಳು ವೈರಲ್ ಆಗಿವೆ. ಅದರಲ್ಲಿ ಅನುಷ್ಕಾ ಹಾಗೂ ವಿರಾಟ್ ಪಂಜಾಬಿ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಭಾಂಗ್ರಾ ನೃತ್ಯ ಮಾಡಿದ್ದಾರೆ.

ಅದರಲ್ಲೂ ಅನುಷ್ಕಾ ಅಂತೂ ಬಾಯಲ್ಲಿ ನೋಟು ಇಟ್ಕೊಂಡು ಕುಣಿದಿದ್ದಾರೆ. ಇದು ಪಕ್ಕಾ ಪಂಜಾಬಿ ಸ್ಟೈಲ್. ಪಂಜಾಬಿ ಮದುವೆಗಳಲ್ಲಿ ಸಾಮಾನ್ಯವಾಗಿ ಇದೇ ರೀತಿಯ ಹಾಡು, ಕುಣಿತ ನಡೆಯುತ್ತದೆ.

ಕೊಹ್ಲಿ ಕೂಡ ಒಳ್ಳೆ ಡಾನ್ಸರ್. ಶಿಖರ್ ಧವನ್ ಮಗನನ್ನು ಎತ್ತಿಕೊಂಡೇ ಕೊಹ್ಲಿ ಡಾನ್ಸ್ ಮಾಡಿರೋ ವಿಡಿಯೋ ಕೂಡ ವೈರಲ್ ಆಗಿದೆ. ಅಪ್ಪಟ ಭಾರತೀಯ ಧಿರಿಸಿನಲ್ಲಿ ಕಂಗೊಳಿಸ್ತಾ ಇದ್ದ ವಿರುಷ್ಕಾ, ರಿಸೆಪ್ಷನ್ ನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.

ಡಿಸೆಂಬರ್ 11ರಂದು ವಿರಾಟ್ ಹಾಗೂ ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ರು. ಮದುವೆ ದಿನಾಂಕವನ್ನು ವಿರುಷ್ಕಾ ರಹಸ್ಯವಾಗಿಟ್ಟಿದ್ರು. ಹಾಗಾಗಿ ಸಮಾರಂಭದಲ್ಲಿ ಕೆಲವೇ ಕೆಲವು ಅತಿಥಿಗಳು ಮಾತ್ರ ಪಾಲ್ಗೊಂಡಿದ್ರು. ಇದೇ 26ರಂದು ಮುಂಬೈನಲ್ಲಿ ಕೂಡ ರಿಸೆಪ್ಷನ್ ಆಯೋಜಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...