alex Certify
ಕನ್ನಡ ದುನಿಯಾ       Mobile App
       

Kannada Duniya

‘ಮದುವೆ ಬಳಿಕ ವಿರಮಿಸಲ್ಲ, 2 ನೇ ದಿನವೇ ಕೆಲಸಕ್ಕೆ’

priya-mani-d

ಬಹುಭಾಷಾ ನಟಿ ಪ್ರಿಯಾಮಣಿ ಮದುವೆಯಾದ ಬಳಿಕ ವಿರಾಮ ಪಡೆಯದೇ, 2 ನೇ ದಿನವೇ ಕೆಲಸಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಆಗಸ್ಟ್ 23 ರಂದು ಪ್ರಿಯಾಮಣಿ ಅವರ ವಿವಾಹ ಮುಸ್ತಾಫಾ ರಾಜ್ ಜೊತೆ ನಡೆಯಲಿದೆ. ಸರಳವಾಗಿ ಮದುವೆಯಾಗಲಿರುವ ಪ್ರಿಯಾಮಣಿ, ಬೇರೆ ಧರ್ಮಗಳಿಗೆ ಸೇರಿರುವ ನಾವು ರಿಜಿಸ್ಟರ್ ಮ್ಯಾರೇಜ್ ಆಗಲಿದ್ದೇವೆ. ನಾವಿಬ್ಬರು ಪರಸ್ಪರ ಒಪ್ಪಿತವಾದ ರೀತಿಯಲ್ಲಿ ನಮ್ಮ ಮದುವೆ ನೆರವೇರಲಿದೆ ಎಂದು ತಿಳಿಸಿದ್ದಾರೆ.

ಮದುವೆ ಖಾಸಗಿ ಸಮಾರಂಭವಾಗಿದೆ. ಮದುವೆಯ ಬಳಿಕವೂ ನಾನು ಸಿನಿಮಾಗಳಲ್ಲಿ ಅಭಿನಯಿಸುತ್ತೇನೆ. 2 ನೇ ದಿನಕ್ಕೆ ನಾನು ಕೆಲಸಕ್ಕೆ ಹಾಜರಾಗುತ್ತೇನೆ. ನನ್ನ ಕೈಯಲ್ಲಿ 2 ಸಿನಿಮಾಗಳಿವೆ ಎಂದು ಹೇಳಿದ್ದಾರೆ.

ಮುಸ್ತಾಫಾ ರಾಜ್ ಮತ್ತು ಪ್ರಿಯಾಮಣಿ ಕೆಲವರ್ಷಗಳಿಂದ ಪ್ರೀತಿಸಿದ್ದು, ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆಗಸ್ಟ್ 23 ರಂದು ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...