alex Certify
ಕನ್ನಡ ದುನಿಯಾ       Mobile App
       

Kannada Duniya

ಸೈಫ್-ಕರೀನಾ ಪುತ್ರನ ಹೊಸ ಹೆಸರೇನು ಗೊತ್ತಾ..?

not-taimur-ali-khan-kareena-kapoor-khan-calls-her-son-by-this-nameಬಾಲಿವುಡ್ ತಾರಾ ದಂಪತಿ ಸೈಫ್ ಆಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್ ತಮ್ಮ ಪುತ್ರನಿಗೆ ಮಂಗೋಲಿಯಾದ ದೊರೆ ತೈಮೂರ್ ಆಲಿಖಾನ್ ಹೆಸರಿಟ್ಟಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ದಂಪತಿಗಳು ಈ ಕುರಿತು ಮೌನ ಮುರಿದಿದ್ದಾರೆ.

ತಮ್ಮ ಪುತ್ರನಿಗೆ ತೈಮೂರ್ ಆಲಿಖಾನ್ ಹೆಸರಿನ ಬದಲು ಆತನನ್ನು ಲಿಟ್ಲ್ ಜಾನ್ ಎಂಬ ನಿಕ್ ನೇಮ್ ಮೂಲಕ ಕರೆಯುವುದಾಗಿ ಕರೀನಾ ಕಪೂರ್ ಹೇಳಿಕೊಂಡಿದ್ದಾರೆ. ಈ ಹೆಸರಿನಿಂದ ಕರೆಯುವುದೇಕೆ ಎಂಬುದರ ಕುರಿತು ಅವರು ಸ್ಪಷ್ಟನೆಯನ್ನೇನೂ ಕೊಟ್ಟಿಲ್ಲ.

ಸೈಫ್ ಆಲಿಖಾನ್ ಅಭಿನಯದ ಚಿತ್ರವೊಂದು ಬಿಡುಗಡೆಯ ಹೊಸ್ತಿಲಿನಲ್ಲಿದ್ದು, ಇಂತಹ ಸಂದರ್ಭದಲ್ಲಿ ಅನಾವಶ್ಯಕ ವಿವಾದಗಳನ್ನು ಸೃಷ್ಟಿಸಿಕೊಳ್ಳುವುದು ಬೇಡವೆಂಬ ಕಾರಣಕ್ಕೆ ದಂಪತಿ ಈ ಒಂದು ನಿರ್ಧಾರಕ್ಕೆ ಬಂದಿರಬಹುದೆಂದು ಅರ್ಥೈಸಲಾಗುತ್ತಿದೆ. ಸೈಫ್-ಕರೀನಾ ತಮ್ಮ ಪುತ್ರನಿಗೆ ತೈಮೂರ್ ಆಲಿಖಾನ್ ಎಂಬ ಹೆಸರಿಟ್ಟಿರುವುದು ಅವರ ವೈಯಕ್ತಿಕ ತೀರ್ಮಾನ ಅದನ್ನು ಗೌರವಿಸಬೇಕೆಂಬ ಅಭಿಪ್ರಾಯಗಳೂ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದ್ದವು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...