alex Certify
ಕನ್ನಡ ದುನಿಯಾ       Mobile App
       

Kannada Duniya

ಸೈಫ್ ಪುತ್ರಿಯ ಬಾಯ್ ಫ್ರೆಂಡ್ ಅವನಲ್ಲ, ಇವನು….

sara13456ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್,  ಬಾಲಿವುಡ್ ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾಳೆ. ಬಿಟೌನ್ ಗೆ ಕಾಲಿಡುವ ಮುನ್ನವೇ ಸಾರಾ ಬಗ್ಗೆ ಸಾಕಷ್ಟು ಗಾಸಿಪ್ ಗಳು ಹರಿದಾಡ್ತಾ ಇವೆ.

ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ವೀರ್ ಪಹರಿಯಾ ಜೊತೆ ಸಾರಾ ಹೆಸರು ಕೇಳಿ ಬಂದಿತ್ತು. ಇಬ್ಬರೂ ಸಖತ್ ಕ್ಲೋಸ್ ಆಗಿದ್ದಾರೆ ಅನ್ನೋ ಸುದ್ದಿ ಬಾಲಿವುಡ್ ತುಂಬೆಲ್ಲಾ ಹರಿದಾಡ್ತಾ ಇತ್ತು. ಆದ್ರೆ ಸಾರಾ ಬಾಯ್ ಫ್ರೆಂಡ್ ವೀರ್ ಅಲ್ಲ ಎನ್ನುತ್ತಿವೆ ಮೂಲಗಳು, ಬೇರೊಬ್ಬ ತಾರಾ ಪುತ್ರನ ಜೊತೆ ಸಾರಾ ಡೇಟಿಂಗ್ ಮಾಡ್ತಿದ್ದಾಳೆ.

ಆತ ಬೇರೆ ಯಾರೂ ಅಲ್ಲ, ಶಾಹಿದ್ ಕಪೂರ್ ಮಲ ಸಹೋದರ ಇಶಾನ್ ಖಟ್ಟರ್. ಕರಣ್ ಜೋಹರ್ ನಿರ್ದೇಶನದ ಚಿತ್ರದಲ್ಲಿ ಸಾರಾ ಹಾಗೂ ಇಶಾನ್ ಜೋಡಿಯಾಗಿ ನಟಿಸಲಿದ್ದಾರೆ ಎನ್ನಲಾಗ್ತಿದೆ. ಮರಾಠಿ ಬ್ಲಾಕ್ ಬಸ್ಟರ್ ಚಿತ್ರ ‘ಸೈರಾಟ್’ ಅನ್ನು ಕರಣ್ ರಿಮೇಕ್ ಮಾಡ್ತಿದ್ದಾರೆ. ಒಟ್ಟಿಗೆ ಅಭಿನಯಿಸುವ ಮುನ್ನವೇ ಸಾರಾ ಹಾಗೂ ಇಶಾನ್ ಪರಸ್ಪರ ಇಷ್ಟಪಟ್ಟಿದ್ದಾರೆ ಅಂತಾನೇ ಎಲ್ರೂ ಮಾತಾಡಿಕೊಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...