alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಎಂಟ್ರಿಗೆ ಸೈಫ್ ಪುತ್ರಿ ಸಾರಾ ರೆಡಿ….

saraಕಳೆದ  ಕೆಲ ದಿನಗಳಿಂದ  ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ  ಅಲಿ ಖಾನ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾಳೆ. ಮೊದಲು ಗುಂಡಗಿದ್ದ ಸಾರಾ ಈಗ ಬಳುಕುವ ಬಳ್ಳಿಯಂತಾಗಿರೋದು ಎಲ್ಲರ ಹುಬ್ಬೇರಿಸಿತ್ತು.

ಅಷ್ಟರಲ್ಲೇ ಸಾರಾ ಬಾಲಿವುಡ್ ಗೆ ಪದಾರ್ಪಣೆ ಮಾಡ್ತಿದ್ದಾರೆ ಅನ್ನೋ ಸುದ್ದಿ ಕೂಡ ಸಿಕ್ಕಿದೆ. ಕರಣ್ ಜೋಹರ್ ನಿರ್ದೇಶನದ ಸ್ಟೂಡೆಂಟ್ ಆಫ್ ದಿ ಇಯರ್-2ನಲ್ಲಿ ಸಾರಾ, ಟೈಗರ್ ಶ್ರಾಫ್ ಜೊತೆ ನಟಿಸ್ತಾರೆ ಅನ್ನೋ ಸುದ್ದಿ ಇತ್ತು. ಆದ್ರೆ ತಾಯಿ ಅಮೃತಾ ಸಿಂಗ್ ನಿರಾಕರಿಸಿದ್ರಿಂದ ಈ ಚಿತ್ರದಿಂದ ಸಾರಾ ಹೊರನಡೆದಿದ್ದಾರಂತೆ. ಸಾರಾ, ಅನಿಲ್ ಶರ್ಮಾರ ಜೀನಿಯಸ್ ಚಿತ್ರದ ಮೂಲಕ ಬಿಟೌನ್ ಗೆ ಗ್ರ್ಯಾಂಡ್ ಎಂಟ್ರಿ ಕೊಡ್ತಾರೆ ಎನ್ನಲಾಗ್ತಾ ಇದೆ.

ಜೀನಿಯಸ್ ಚಿತ್ರದಲ್ಲಿ ಅನಿಲ್ ಶರ್ಮಾರ ಪುತ್ರ ಉತ್ಕರ್ಷ್ ಹೀರೋ ಆಗಿ ನಟಿಸಲಿದ್ದಾರೆ. ಮತ್ತೊಂದ್ಕಡೆ ಸನ್ನಿ ಡಿಯೋಲ್ ಕೂಡ ತಮ್ಮ ಮಗ ಕರಣ್ ಅಭಿನಯದ ಚೊಚ್ಚಲ ಚಿತ್ರದಲ್ಲಿ ನಟಿಸುವಂತೆ ಸಾರಾ ಅಲಿ ಖಾನ್ ಗೆ ಆಫರ್ ಕೊಟ್ಟಿದ್ದಾರಂತೆ. ಹಾಗಾಗಿ ಸದ್ಯದಲ್ಲೇ ಸೈಫ್ ಪುತ್ರಿ ಬೆಳ್ಳಿ ತೆರೆ ಮೇಲೆ ಮಿಂಚೋದು ಗ್ಯಾರಂಟಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...