alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರಿಯ ಸಿನಿಮಾಕ್ಕೆ ಕತ್ರೀನಾ ಪ್ರೊಡ್ಯೂಸರ್..?

kat

ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ ಬಳಿಕ ನಟಿ ಕತ್ರೀನಾ ಕೈಫ್ ಕೂಡ ಸಿನಿಮಾ ನಿರ್ಮಾಣಕ್ಕೆ ಕೈಹಾಕ್ತಿದ್ದಾರೆ. ನಿರ್ಮಾಪಕಿಯಾಗಲು ಕ್ಯಾಟ್ ರೆಡಿಯಾಗಿದ್ದಾರೆ. ತಮ್ಮದೇ ಪ್ರೊಡಕ್ಷನ್ ಹೌಸ್ ಆರಂಭಿಸಲು ತಯಾರಿ ಶುರುಮಾಡಿದ್ದಾರಂತೆ. ತನ್ನ ಸಹೋದರಿ ಇಸಾಬೆಲ್ ಳನ್ನು ಸಿನಿದುನಿಯಾಕ್ಕೆ ಕರೆತರುವುದು ಕತ್ರೀನಾರ ಪ್ಲಾನ್.

ಇದಕ್ಕಾಗಿ ನಟ ಸಲ್ಮಾನ್ ಖಾನ್ ಬಳಿ ಕತ್ರೀನಾ ಮನವಿ ಮಾಡಿದ್ದಾರೆ ಎನ್ನಲಾಗ್ತಿತ್ತು. ಆದ್ರೆ ಖುದ್ದು ಸಲ್ಮಾನ್ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಸಹೋದರಿಯನ್ನು ಚಿತ್ರರಂಗಕ್ಕೆ ಪರಿಚಯಿಸಲು ಖುದ್ದು ಕತ್ರೀನಾ ನಿರ್ಮಾಪಕಿಯಾಗಿ ಬದಲಾಗ್ತಿದ್ದಾರೆ. ಈ ಬಗ್ಗೆ ಸ್ನೇಹಿತರು ಹಾಗೂ ಆತ್ಮೀಯ ನಿರ್ದೇಶಕರ ಜೊತೆಗೂ ಕತ್ರೀನಾ ಚರ್ಚೆ ಮಾಡ್ತಿದ್ದಾರೆ.

ಒಂದಲ್ಲ ಒಂದು ದಿನ ನಿರ್ಮಾಪಕಿಯಾಗ್ತೇನೆ ಎನ್ನುವ ಕತ್ರೀನಾ, ಸದ್ಯಕ್ಕೆ ಯಾವುದೂ ಫೈನಲ್ ಆಗಿಲ್ಲ ಅಂತಾ ತಿಳಿಸಿದ್ದಾರೆ. ಕತ್ರೀನಾ ಸಹೋದರಿ ಇಸಾಬೆಲ್ ಬ್ರಿಟನ್ ನ ಮಾಡೆಲ್. ಆಗಾಗಾ ಕತ್ರೀನಾ ಜೊತೆ ಬಾಲಿವುಡ್ ಪಾರ್ಟಿಗಳಲ್ಲಿ ಕಾಣಿಸಿಕೊಳ್ತಾಳೆ. ‘ಡಾಕ್ಟರ್ ಕ್ಯಾಬೀ’ ಚಿತ್ರದಲ್ಲಿ ಕುಣಾಲ್ ನಯ್ಯರ್ ಜೊತೆ ನಟಿಸುವ ಮೂಲಕ ಡೆಬ್ಯೂ ಮಾಡಿದ್ದಾಳೆ. ಆ ಚಿತ್ರಕ್ಕೆ ನಟ ಸಲ್ಮಾನ್ ಸಹ ನಿರ್ಮಾಪಕರಾಗಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...