alex Certify
ಕನ್ನಡ ದುನಿಯಾ       Mobile App
       

Kannada Duniya

ನವೆಂಬರ್ ನಲ್ಲಿ ಡಬಲ್ ಧಮಾಕ: ಬಾಲಿವುಡ್ ನ ಎರಡು ಜೋಡಿಗೆ ವಿವಾಹ

ಬಾಲಿವುಡ್ ನ ಹಾಟ್ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇದೇ ನವೆಂಬರ್ ಅಂತ್ಯದೊಳಗೆ ವಿವಾಹವಾಗುವುದು ತಿಳಿದೇ ಇದೆ. ಈಗ ಹೊಸ ವಿಷಯವೆಂದರೆ ಪ್ರಿಯಾಂಕ ಚೋಪ್ರಾ ಹಾಗು ನಿಕ್ ಜೋಡಿ ಕೂಡ ಇದೇ ನವೆಂಬರ್ ನಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಚಿತ್ರರಂಗದ ವಲಯದಲ್ಲಿ ಹರಿದಾಡುತ್ತಿದೆ. ಇದು ನಿಜವಾದರೆ ನವೆಂಬರ್ ನಲ್ಲಿ ಎರಡು ಗ್ರಾಂಡ್ ಇವೆಂಟ್ ಗಳಿಗೆ ಬಾಲಿವುಡ್ ಸಾಕ್ಷಿಯಾಗಲಿದೆ.

ಕೆಲ ಮೂಲಗಳ ಪ್ರಕಾರ ನಿಕ್ ಹಾಗು ಪ್ರಿಯಾಂಕ ಜೋಡಿ ನವೆಂಬರ್ ಕೊನೆ ವಾರದಲ್ಲಿ ಮೆಹ್ರಾ ನಗರ್ ಪೋರ್ಟ್ ನಲ್ಲಿ ವಿವಾಹವಾಗಲಿದೆ. ನವೆಂಬರ್ ಎರಡನೇ ವಾರಾಂತ್ಯದ ವೇಳೆ ನಿಕ್ ಭಾರತಕ್ಕೆ ಬಂದಿಳಿಯಲಿದ್ದಾನೆ. ವಿವಾಹದ ದಿನಾಂಕವಿನ್ನು ನಿರ್ಧಾರವಾಗಬೇಕಿದೆ. ಇಂಡೋ ವೆಸ್ಟರ್ನ್ ಪದ್ಧತಿಯಲ್ಲಿ ವಿವಾಹ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಇವೆರಡು ವಿವಾಹಗಳ ದಿನಾಂಕ ಅಧಿಕೃತವಾಗಿ ಘೋಷಿಸಲ್ಪಡದಿದ್ದರೂ ಅಭಿಮಾನಿಗಳಲ್ಲಿ ಕುತೂಹಲ ವಿಪರೀತ ಹೆಚ್ಚಿದೆ. ಇದಕ್ಕೆ ತೆರೆ ಬೀಳುವುದೆಂದು ಎಂಬುದನ್ನು ಕಾದು ನೋಡಬೇಕಷ್ಟೇ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...