alex Certify
ಕನ್ನಡ ದುನಿಯಾ       Mobile App
       

Kannada Duniya

‘ಕೇದಾರನಾಥ್’ ಬದಲು ‘ಸಿಂಬಾ’ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗ್ತಾಳಾ ಈ ನಟಿ…?

ಬಾಲಿವುಡ್ ಕಲಾವಿದರ ಮಕ್ಕಳು ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಧಡಕ್ ಚಿತ್ರದ ಮೂಲಕ ಜಾಹ್ನವಿ ಕಪೂರ್ ಬಾಲಿವುಡ್ ಪ್ರವೇಶ ಮಾಡಿದ್ದಾಳೆ. ಈ ಮಧ್ಯೆ ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್, ಕೇದಾರನಾಥ್ ಮೂಲಕ ಬಾಲಿವುಡ್ ಪ್ರವೇಶ ಮಾಡಬೇಕಿತ್ತು. ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದೆ. ಆದ್ರೆ ಚಿತ್ರದ ಬಿಡುಗಡೆ ದಿನಾಂಕ ಮತ್ತೊಮ್ಮೆ ಮುಂದೆ ಹೋಗಿದೆ.

ಕೇದಾರನಾಥ್ ಚಿತ್ರದಲ್ಲಿ ಸಾರಾ, ಸುಶಾಂತ್ ಸಿಂಗ್ ರಜಪೂತ್ ಜೊತೆ ನಟಿಸಿದ್ದಾಳೆ. ಈ ಚಿತ್ರದ ಶೂಟಿಂಗ್ ಮುಗಿದ ನಂತ್ರ ಸಾರಾ, ಸಿಂಬಾ ಚಿತ್ರಕ್ಕೆ ಸಹಿ ಹಾಕಿದ್ದಾಳೆ. ಇಂದಿನಿಂದ ಸಿಂಬಾ ಚಿತ್ರದ ಶೂಟಿಂಗ್ ಶುರುವಾಗ್ತಿದೆ. ರೋಹಿತ್ ಶೆಟ್ಟಿ, ಕರಣ್ ಜೋಹರ್ ನ ಸಿಂಬಾ ಚಿತ್ರದಲ್ಲಿ ರಣವೀರ್ ಸಿಂಗ್ ನಟಿಸುತ್ತಿದ್ದಾರೆ. ರಣವೀರ್ ಜೊತೆ ಸಾರಾ ರೋಮ್ಯಾನ್ಸ್ ಮಾಡಲಿದ್ದು, ಕೇದಾರನಾಥ ಚಿತ್ರಕ್ಕಿಂತ ಮೊದಲು ಸಿಂಬಾ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ.

ನವೆಂಬರ್ ನಲ್ಲಿ ಕೇದಾರನಾಥ್ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಆದ್ರೆ ನವೆಂಬರ್ 30 ರಂದು ರಜನಿಕಾಂತ್, ಅಕ್ಷಯ್ ಕುಮಾರ್ ಅಭಿನಯದ ಚಿತ್ರ ತೆರೆಗೆ ಬರ್ತಿದೆ. ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡದ ನಿರ್ದೇಶಕರು ದಿನಾಂಕ ಮುಂದೂಡಿದ್ದಾರೆ. ಕೇದಾರನಾಥ್, ಸಾರಾ ಅಲಿ ಖಾನ್ ಮೊದಲ ಚಿತ್ರವಾದ್ರೂ ತೆರೆ ಮೇಲೆ ಸಿಂಬಾ ಬರುವ ಸಾಧ್ಯತೆ ಹೆಚ್ಚಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...