alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಂಬಾಲಿಸುತ್ತಿದ್ದ ವ್ಯಕ್ತಿಗೆ ಹೊಡೆದು ಬುದ್ದಿ ಕಲಿಸಿದ್ಲು ನಟಿ

ಬಾಹುಬಲಿ ಚಿತ್ರದ ಮನೋಹರಿ ಹಾಡಿನಲ್ಲಿ ಸೊಂಟ ಕುಣಿಸಿ ಸಾಕಷ್ಟು ಸುದ್ದಿಗೆ ಬಂದಿದ್ದ ನೋರಾ ಪತೇಹಿ, ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯವಾಗಿದ್ದಾಳೆ. ಡಾನ್ಸನ್ನು ತುಂಬಾ ಇಷ್ಟಪಡುವ ನೋರಾ ಅವಕಾಶ ಸಿಕ್ಕರೆ ಇಡೀ ದಿನ ಸೊಂಟ ಕುಣಿಸ್ತಾಳೆ. ಈಗ ನೋರಾ ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿರುವ ವಿಡಿಯೋವೊಂದು ಸುದ್ದಿಗೆ ಕಾರಣವಾಗಿದೆ.

ವಿಡಿಯೋದಲ್ಲಿ ನೋರಾ ಕೆಂಪು ಸೀರೆಯುಟ್ಟು ರಸ್ತೆ ಮೇಲೆ ಹೋಗ್ತಿರುತ್ತಾಳೆ. ಈ ವೇಳೆ ಆಕೆ ಪರ್ಸ್ ಕೆಳಗೆ ಬೀಳುತ್ತದೆ. ಇದನ್ನು ನೋರಾ ನೋಡೋದಿಲ್ಲ. ಅಲ್ಲಿದ್ದ ಯುವಕನೊಬ್ಬ ನೋರಾನಿಗೆ ಪರ್ಸ್ ಬಗ್ಗೆ ಕೂಗಿ ಹೇಳ್ತಾನೆ. ಹಿಂತಿರುಗಿ ಹುಡುಗನನ್ನು ನೋರಾ ನೋಡ್ತಿದ್ದಂತೆ ಆ ಹುಡುಗನಿಗೆ ಬಾಲಿವುಡ್ ಸ್ಟೈಲ್ ನಲ್ಲಿ ಪ್ರೀತಿ ಶುರುವಾಗುತ್ತದೆ. ನೋರಾನನ್ನು ಮನೆಯವರೆಗೆ ಹಿಂಬಾಲಿಸಿಕೊಂಡು ಬರ್ತಾನೆ ಹುಡುಗ. ಮನೆ ಗೇಟ್ ಬಳಿ ಬರ್ತಿದ್ದಂತೆ ಆತನ ಮುಖಕ್ಕೆ ಖಾರದಪುಡಿ, ಮೆಣಸಿನ ಪುಡಿ ಸ್ಪ್ರೇ ಹಾಕಿ ಆತನಿಗೆ ಹೊಡೆಯುತ್ತಾಳೆ ನೋರಾ.

ನೋರಾ ಜೊತೆ ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಹೆಸರು ಬಾಹಿಜ್ ಕುಡೊರಾ. ಬಾಹಿಜ್ ವಿಡಿಯೋ ಬ್ಲಾಗರ್. ನೋರಾಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಈವರೆಗೆ 3.26 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...