alex Certify
ಕನ್ನಡ ದುನಿಯಾ       Mobile App
       

Kannada Duniya

ಗಣೇಶ ಚತುರ್ಥಿಗೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ ಸ್ಯಾಂಡಲ್ವುಡ್

ಗಣೇಶ ಹಬ್ಬದ ಸಂಭ್ರಮ ಈ ಬಾರಿ ಸ್ಯಾಂಡಲ್ವುಡ್ ನಲ್ಲಿ ತುಂಬಾನೇ ಡಲ್ ಹೊಡೀತಿದೆ. ಯಾಕಂದ್ರೆ ಯಾವುದೇ ಬಿಗ್ ಬಜೆಟ್ ನ ಚಿತ್ರಗಳಾಗ್ಲಿ ಅಥವಾ ಬಹು ನಿರೀಕ್ಷಿತ ಚಿತ್ರಗಳಾಗ್ಲಿ ಈ ಬಾರಿ ಗಣೇಶ ಚತುರ್ಥಿಗೆ ಬಿಡುಗಡೆಯಾಗ್ತಿಲ್ಲ. ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವ ಚಿತ್ರಗಳಾವುದು ತೆರೆಗೆ ಬಂದಿಲ್ಲ. ಸ್ಯಾಂಡಲ್ವುಡ್ ಹಿರೋಗಳು ಅಭಿಮಾನಿಗಳನ್ನ ಹಬ್ಬದ ಪ್ರಯುಕ್ತ ಚಿತ್ರಮಂದಿರಕ್ಕೆ ಕರೆಸಿಕೊಳ್ಳುವ ಪ್ರಯತ್ನ ಮಾಡಿಲ್ಲ.

ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ಸ್ ಆದಂತಾ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ದರ್ಶನ್, ಸುದೀಪ್, ಯಶ್ ಸೇರಿದಂತೆ ಹಲವು ನಾಯಕರ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಶಿವಣ್ಣ- ಸುದೀಪ್ ಕಾಂಬಿನೇಷನ್ ನ ವಿಲನ್ ಸಿನಿಮಾ ಗಣಪತಿ ಹಬ್ಬಕ್ಕೆ ತೆರೆಗೆ ತರುವ ಸಾಧ್ಯತೆ ಇತ್ತಾದ್ರು ಅಂತಿಮ ಕ್ಷಣದಲ್ಲಿ ಆ ಅವಕಾಶ ಕೂಡ ಮಿಸ್ ಆಯ್ತು.

ಬಿಗ್ ಸ್ಟಾರ್ಸ್ ಚಿತ್ರಗಳು ಮಾತ್ರವಲ್ಲ. ಸೆಕೆಂಡ್ ಲೇಯರ್ ಹೀರೋಗಳ ಸಿನಿಮಾಗಳು ಕೂಡ ತೆರೆಗೆ ಬಂದಿಲ್ಲ. ಕನ್ನಡ ಚಿತ್ರರಂಗ ಹೊರತುಪಡಿಸಿದ್ರೆ ಪರಭಾಷಾ ಚಿತ್ರಗಳು ಹಬ್ಬದ ಪ್ರಯುಕ್ತ ತೆರೆಯ ಮೇಲೆ ರಾರಾಜಿಸುತ್ತಿವೆ. ಹಾಗಾಗಿ ಸ್ಯಾಂಡಲ್ ವುಡ್ ಈ ಬಾರಿ ಅಭಿಮಾನಿಗಳ ಪಾಲಿಗೆ ನೀರಸ ಗಣೇಶೋತ್ಸವವನ್ನು ಆಚರಿಸುವಂತೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...