alex Certify
ಕನ್ನಡ ದುನಿಯಾ       Mobile App
       

Kannada Duniya

ಮತ ಚಲಾಯಿಸಿ ಸಂಭ್ರಮಿಸಿದ ನಿವೇದಿತಾ ಗೌಡ

‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡರಿಗೆ ಇಂದು ವಿಶೇಷ ದಿನ. ಹೌದು, ನಿವೇದಿತಾ ಗೌಡ ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಹುಟ್ಟು ಹಬ್ಬದ ದಿನದಂದೇ ಮೊದಲ ಬಾರಿಗೆ ತಮ್ಮ ಮತ ಚಲಾಯಿಸಿ ಸಂಭ್ರಮಿಸಿದ್ದಾರೆ.

ಮೈಸೂರಿನ ಮತಗಟ್ಟೆಯಲ್ಲಿ ಪ್ರಥಮ ಬಾರಿಗೆ ಹಕ್ಕು ಚಲಾಯಿಸಿದ ನಿವೇದಿತಾ ಗೌಡ, ಬಳಿಕ ತಮ್ಮ ಎಂದಿನ ಶೈಲಿಯಲ್ಲೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಇದು ತಮ್ಮ ಮೊದಲ ಬಾರಿಯ ಮತದಾನವಾಗಿದ್ದು, ಜಂಪ್ ಮಾಡಬೇಕೆನ್ನುವಷ್ಟು ಖುಷಿಯಾಗುತ್ತಿದೆ ಎಂದರು.

ಎಲ್ಲರೂ ತಪ್ಪದೇ ಮತ ಚಲಾಯಿಸಿ ಎಂದು ಹೇಳಿದ ನಿವೇದಿತಾ ಗೌಡ, ಜನ ಪ್ರತಿನಿಧಿಗಳು ಅದು ಮಾಡಿಲ್ಲ, ಇದು ಮಾಡಿಲ್ಲ ಎಂದು ಓಟು ಹಾಕದೆ ಕೆಲವರು ಹೇಳುವ ಬದಲು ಇಂದು ಮತ ಚಲಾಯಿಸಿದರೆ ಪ್ರಶ್ನೆ ಮಾಡುವ ಹಕ್ಕು ದೊರೆಯುತ್ತದೆ. ಮತದಾನಕ್ಕೆ ಇನ್ನೂ ಸಾಕಷ್ಟು ಸಮಯಾವಕಾಶವಿರುವ ಕಾರಣ ಮತದಾನದ ಅವಧಿ ಅಂತ್ಯಗೊಳ್ಳುವುದರೊಳಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿ ಎಂದು ಮನವಿ ಮಾಡಿದರು.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...