alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಟೈಲಿಶ್ ಅವತಾರದಲ್ಲಿ ಬಾಯ್ ಫ್ರೆಂಡ್ ಜೊತೆ ಪಿಗ್ಗಿ

ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಅಮೆರಿಕಾ ಹಾಡುಗಾರ ನಿಕ್ ಜೋನಸ್ ಪ್ರೀತಿ ಮಾಡ್ತಿದ್ದಾರೆಂಬ ಸುದ್ದಿಯಿದೆ. ಇಬ್ಬರೂ ಮಾಧ್ಯಮದ ಮುಂದೆ ಯಾವುದೇ ಹೇಳಿಕೆ ನೀಡಿಲ್ಲ. ಆದ್ರೆ ಆಗಾಗ ಒಟ್ಟಿಗೆ ಕಾಣಿಸಿಕೊಂಡು ಸದ್ದು ಮಾಡ್ತಾರೆ.

ಸಾಮಾಜಿಕ ಜಾಲತಾಣ ಬಳಕೆದಾರರು ಪಿಗ್ಗಿ-ನಿಕ್ ರನ್ನು ಸ್ಟೈಲಿಸ್ಟ್ ಜೋಡಿಯಂತೆ ನೋಡ್ತಿದೆ. ನಿಕ್-ಪ್ರಿಯಾಂಕ ಒಟ್ಟಿಗೆ ಕಾಣಿಸಿಕೊಂಡಾಗೆಲ್ಲ ಅವ್ರ ಸ್ಟೈಲ್, ಬಟ್ಟೆ ಹಾಗೂ ಕೆಮೆಸ್ಟ್ರಿ ಎಲ್ಲರಿಗೂ ಇಷ್ಟವಾಗ್ತಿದೆ. ಇತ್ತೀಚಿಗೆ ಪ್ರಿಯಾಂಕ ಹಾಗೂ ನಿಕ್ ಜೊತೆಗಿರುವ ಹೊಸ ಫೋಟೋ ವೈರಲ್ ಆಗಿದೆ,

ಇಬ್ಬರೂ ಬಿಳಿ ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು. ಬಿಳಿ ಬಣ್ಣದ ಡ್ರೆಸ್ ನಲ್ಲಿ ಜೋಡಿ ಸುಂದರವಾಗಿ ಕಾಣ್ತಿದೆ. ಪ್ರಿಯಾಂಕ ಜುಲೈ 18 ರಂದು 36ನೇ ವಸಂತಕ್ಕೆ ಕಾಲಿಟ್ಟಿದ್ದಾಳೆ. ಹುಟ್ಟುಹಬ್ಬಕ್ಕೂ ಮುನ್ನ ನಿಕ್ ಜೊತೆ ಪಾರ್ಟಿ ಮೂಡಿನಲ್ಲಿ ಪಿಗ್ಗಿ ಕಾಣಿಸಿಕೊಂಡಿದ್ದಳು. ಶೀಘ್ರವೇ ಬಾಲಿವುಡ್ ಚಿತ್ರಕ್ಕೆ ವಾಪಾಸ್ ಆಗ್ತಿರುವ ಪ್ರಿಯಾಂಕ ಸದ್ಯ ನ್ಯೂಯಾರ್ಕ್ ನಲ್ಲಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...