alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಯಸಿ ಪ್ರಿಯಾಂಕಳನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದಾರೆ ನಿಕ್

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿರುವ ಹಾಡುಗಾರ ನಿಕ್ ಜೋನಸ್ ಅಮೆರಿಕಾಕ್ಕೆ ವಾಪಸ್ ಆಗಿದ್ದಾರೆ. ತಂದೆ-ತಾಯಿ ಜೊತೆ ನಿಕ್ ಭಾನುವಾರ ರಾತ್ರಿ ಅಮೆರಿಕಾಕ್ಕೆ ಹಿಂತಿರುಗಿದ್ದಾರೆ. ಅಮೆರಿಕಾದಲ್ಲಿದ್ರೂ ನಿಕ್ ಮನಸ್ಸು ಮಾತ್ರ ಭಾರತದಲ್ಲಿದೆ. ನಿಕ್ ಪ್ರೇಯಸಿ ಪ್ರಿಯಾಂಕರನ್ನು ತುಂಬಾ ಮಿಸ್ ಮಾಡಿಕೊಳ್ತಿರುವುದು ಸ್ಪಷ್ಟವಾಗ್ತಿದೆ.

ನಿಕ್ ಸೋಮವಾರ ಪ್ರಿಯಾಂಕ ಚೋಪ್ರಾ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಪ್ರಿಯಾಂಕ ಅನಾಥಾಶ್ರಮಕ್ಕೆ ಹೋಗಿದ್ಲು. ಅಲ್ಲಿ ಮಕ್ಕಳ ಜೊತೆ ಡಾನ್ಸ್ ಮಾಡಿ ಖುಷಿಪಟ್ಟಿದ್ದಾಳೆಂದು ನಿಕ್ ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ನಂತ್ರ ನಿಕ್, ಪ್ರಿಯಾಂಕ ಜೊತೆ ಭಾರತವನ್ನೂ ಮಿಸ್ ಮಾಡಿಕೊಳ್ತಿದ್ದಾರೆಂಬುದು ಸ್ಪಷ್ಟವಾಗಿದೆ.

ಶನಿವಾರ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ, ಸಂಜೆ ಪಾರ್ಟಿ ನೀಡಿದ ಜೋಡಿ ಭಾನುವಾರ ಬೆಳಿಗ್ಗೆ ಅನಾಥಾಶ್ರಮಕ್ಕೆ ತೆರಳಿದ್ದರು. ಅಲ್ಲಿ ಪ್ರಿಯಾಂಕ ಮಕ್ಕಳ ಜೊತೆ ಡಾನ್ಸ್ ಮಾಡಿದ್ದಾರೆ. ನಿಕ್ ಅದ್ರ ವಿಡಿಯೋ ಮಾಡಿದ್ದಾರೆ. ಆ ವಿಡಿಯೋವನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...