alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕಾ ಜೊತೆಗಿನ ನಿಕ್ ಪ್ರೀತಿಗೆ ಇದಂತೆ ಕಾರಣ…!

ಬಾಲಿವುಡ್ ನ ಪಿಗ್ಗಿ ಚಾಪ್ಸ್ ಪ್ರಿಯಾಂಕ ಚೋಪ್ರಾ ಮತ್ತು ಹಾಲಿವುಡ್ ಸಿಂಗರ್ ಕಮ್ ಆಕ್ಟರ್ ನಿಕ್ ಜೋನಾಸ್ ಲವ್ ಮ್ಯಾಟರ್ ಈಗ ಮುಚ್ಚಿಟ್ಟ ವಿಚಾರವೇನಲ್ಲ. ಇಬ್ಬರು ಇನ್ನು ಕೆಲವೇ ದಿನದಲ್ಲಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ ಅನ್ನೋ ವಿಚಾರ ಎಲ್ಲಾ ಕಡೆಯಲ್ಲೂ ಓಡಾಡ್ತಿದೆ. ಇದರ ನಡುವೆ ಪ್ರಿಯಾಂಕ ಸನಿಹಕ್ಕೆ ನಿಕ್ ಬಂದದ್ದಾದ್ರು ಹೇಗೆ ಅನ್ನೋ ಪ್ರಶ್ನೆ ಈಗ ಬಿಟೌನ್ ನ ತುಂಬೆಲ್ಲಾ ಹರಿದಾಡ್ತಿದೆ. ಅದಕ್ಕೆ ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ಕೇಳಿ ಬರ್ತಿರೋ ಉತ್ತರಗಳು ಎಲ್ಲರ ಹುಬ್ಬೇರಿಸುವಂತಿದೆ.

ಕೆಲವರ ಪ್ರಕಾರ ಪ್ರಿಯಾಂಕಾ ತನಗಿಂತ ವಯಸ್ಸಿನಲ್ಲಿ ಹಿರಿಯಳು ಅನ್ನೋ ಕಾರಣಕ್ಕೆ ನಿಕ್ ಜೋನಾಸ್ ಗೆ ಪ್ರಿಯಾಂಕಾ ಮೇಲೆ ಪ್ರೀತಿ ಹುಟ್ಟೋದಕ್ಕೆ ಕಾರಣವಂತೆ. ನಿಕ್ ಜೋನಾಸ್ ಗಿಂತ ಪ್ರಿಯಾಂಕ ಚೋಪ್ರಾ 10 ವರ್ಷ ದೊಡ್ಡವಳು. ನಿಕ್ ಜೋನಾಸ್ ನ ಡೇಟಿಂಗ್ ಹಿಸ್ಟರಿಯಲ್ಲಿ ತನಗಿಂತ ಹಿರಿಯರ ಮೇಲೆ ಪ್ರೀತಿ ಹುಟ್ಟಿದ ಘಟನೆಗಳಿವೆ.

ನಿಕ್ ರನ್ನ ಹತ್ತಿರದಿಂದ ಬಲ್ಲವರು ಹೇಳುವ ಪ್ರಕಾರ ಪ್ರೀತಿಗೆ ವಯಸ್ಸು ಅನ್ನೋದು ಕೇವಲ ನಂಬರ್ ಅಷ್ಟೆ. ಇದಕ್ಕೂ ಹಿಂದೆ ನಿಕ್ ಗೆ ತನಗಿಂತ 13 ವರ್ಷ ದೊಡ್ಡವರಾದ ಕೇಟ್ ಹುಡ್ ಸನ್ ಮತ್ತು 8 ವರ್ಷ ದೊಡ್ಡವರಾದ ಡೆಲ್ಟಾ ಗುಡ್ರಮ್ ಜೊತೆಗೂ ಬಾಂಧವ್ಯ ಇತ್ತು. ಆದ್ರೆ ಅವರಿಬ್ಬರ ಬಾಂಧವ್ಯದ ಬಗ್ಗೆ ನಿಕ್ ವಹಿಸಿದ ಪ್ರೌಢಿಮೆಗಿಂತ ಪ್ರಿಯಾಂಕಾ ಚೋಪ್ರಾ ವಿಚಾರದಲ್ಲಿ ಹೆಚ್ಚು ಮೆಚ್ಯೂರ್ಡ್ ಆಗಿ ಯೋಚನೆ ಮಾಡ್ತಿದ್ದಾನೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗ್ತಿದೆ.

ಪ್ರಿಯಾಂಕಾ ಬಾಲಿವುಡ್ ಬ್ಯೂಟಿ ಅನ್ನೋ ಕಾರಣಕ್ಕಷ್ಟೆ ನಿಕ್ ಆಕೆಯನ್ನ ಪ್ರೀತಿಸಲು ಶುರುಮಾಡಲಿಲ್ಲ. ಪ್ರಿಯಾಂಕಾ ಮೇಲೆ ಅವನಿಗಿರುವ ಭಾವನೆಗಳು ಹಿಂದಿನ ಬಾಂಧವ್ಯಗಳನ್ನು ಮೀರಿದ್ದು ಅಂತಿದ್ದಾರೆ ನಿಕ್ ಜೋನಾಸ್ ನ ಅಂತರಂಗ ಬಲ್ಲವರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...