alex Certify
ಕನ್ನಡ ದುನಿಯಾ       Mobile App
       

Kannada Duniya

`ಬಾಹುಬಲಿ ಬಿಫೋರ್ ದಿ ಬಿಗಿನಿಂಗ್’ ಟೀಸರ್ ಬಿಡುಗಡೆ

ಭಾರತೀಯ ಸಿನಿಮಾದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಿದ ಬಾಹುಬಲಿ ಮತ್ತೆ ಚರ್ಚೆಯಲ್ಲಿದೆ. ಬಾಹುಬಲಿ ವೆಬ್ ಸರಣಿ ಪ್ರೇಕ್ಷಕರನ್ನು ರಂಜಿಸಲು ಬರ್ತಿದೆ. ನೆಟ್ಫ್ಲಿಕ್ಸ್ ಶೀಘ್ರವೇ ಬಾಹುಬಲಿ ಚಿತ್ರದ ಪ್ರಿಕ್ವೆಲ್ `ಬಾಹುಬಲಿ-ಬಿಫೋರ್ ದಿ ಬಿಗ್ನಿಂಗ್’ ಶುರು ಮಾಡ್ತಿದೆ. ಇದ್ರ ಟೀಸರ್ ಮಂಗಳವಾರ ಬಿಡುಗಡೆಯಾಗಿದೆ.

ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುವ ಈ ವೆಬ್ ಸರಣಿಯನ್ನು ಎರಡು ಆವೃತ್ತಿಗಳಲ್ಲಿ ತೋರಿಸಲಾಗುವುದು. ಈ ಸರಣಿಯಲ್ಲಿ ಬಾಹುಬಲಿಗಿಂತ ಮೊದಲು ಏನೆಲ್ಲ ಆಗಿತ್ತು ಎಂಬುದನ್ನು ತೋರಿಸಲಾಗುವುದು. ದಿ ರೈಸ್ ಆಫ್ ಶಿವಗಾಮಿನಿ ಕಾದಂಬರಿಯನ್ನು ಆಧರಿಸಿ ವೆಬ್ ಸರಣಿ ಶುರು ಮಾಡಲಾಗ್ತಿದೆ. ಇಲ್ಲಿ ಶಿವಗಾಮಿನಿ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾಳೆ.

ಈಗ ಬಿಡುಗಡೆಯಾದ ಟೀಸರ್ ನಲ್ಲಿ ವಿಶೇಷತೆಯಿಲ್ಲ. ಬಾಹುಬಲಿ ಹಾಗೂ ಬಾಹುಬಲಿ -2 ಚಿತ್ರದ ಕೆಲ ವಿಡಿಯೋಗಳನ್ನು ಟೀಸರ್ ನಲ್ಲಿ ತೋರಿಸಲಾಗಿದೆ. ಮೊದಲ ಋತುವಿನಲ್ಲಿ 6 ಎಪಿಸೋಡ್ ನಲ್ಲಿ ಕಥೆ ಪ್ರಸಾರವಾಗಲಿದೆ. ಆದ್ರೆ ಸರಣಿ ಯಾವಾಗ ಶುರುವಾಗಲಿದೆ ಹಾಗೂ ಯಾರೆಲ್ಲ ನಟಿಸಲಿದ್ದಾರೆಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...