alex Certify
ಕನ್ನಡ ದುನಿಯಾ       Mobile App
       

Kannada Duniya

‘ಪ್ರೇಮ ಸೌಧ’ದ ಬಳಿ ಪತಿ ಜೊತೆ ಕಾಣಿಸಿಕೊಂಡ ಪ್ರೀತಿ

PRIETY-ZINTA-WITH-IN--LAWSಕೆಲ ದಿನಗಳ ಹಿಂದಷ್ಟೇ ಅಮೆರಿಕಾದ ಉದ್ಯಮಿ ಜೀನ್ ಗೂಡೆನಾಗ್ ಜೊತೆ ವಿವಾಹವಾಗಿದ್ದ ಬಾಲಿವುಡ್ ನಟಿ ಪ್ರೀತಿ ಝಿಂಟಾ, ಐಪಿಎಲ್ ಪಂದ್ಯಗಳ ಕಾರಣಕ್ಕಾಗಿ ಭಾರತಕ್ಕೆ ಬಂದಿದ್ದರು. ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲಕಿಯಾಗಿರುವ ಪ್ರೀತಿ, ತಮ್ಮ ತಂಡವನ್ನು ಹುರಿದುಂಬಿಸಲು ಭಾರತಕ್ಕೆ ಬಂದಿದ್ದರೂ ಅವರ ತಂಡ ಅಷ್ಟೇನೂ ಉತ್ತಮ ಪ್ರದರ್ಶನ ನೀಡುತ್ತಿಲ್ಲ.

ಅದರಲ್ಲೂ ಮೊಹಾಲಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ತಂಡ ಕೇವಲ 1 ರನ್ ಗಳ ಅಂತರದಿಂದ ಸೋತಿದ್ದು, ಪ್ರೀತಿ ಝಿಂಟಾಗೆ ತೀರಾ ನಿರಾಸೆಯನ್ನುಂಟು ಮಾಡಿತ್ತು. ಈ ಕಾರಣಕ್ಕಾಗಿಯೇ ತಂಡದ ಕೋಚ್ ಸಂಜಯ್ ಬಂಗಾರ್ ವಿರುದ್ದ ಪ್ರೀತಿ, ಕಿಡಿ ಕಾರಿದ್ದರೆಂಬ ಮಾತು ಕೇಳಿ ಬಂದಿತ್ತು.

ಇದನ್ನು ಸಂಜಯ್ ಬಂಗಾರ್ ಹಾಗೂ ಪ್ರೀತಿ ಝಿಂಟಾ ಇಬ್ಬರೂ ನಿರಾಕರಿಸಿದ್ದು, ಈಗ ತಮ್ಮ ತಂಡದ ಸೋಲಿನ ಕಹಿ ಮರೆಯಲೇನೋ ಎಂಬಂತೆ ಪ್ರೀತಿ ಝಿಂಟಾ, ಪತಿ ಜೀನ್ ಗೂಡೆನಾಗ್ ಮತ್ತವರ ಸಂಬಂಧಿಗಳ ಜೊತೆ ಪ್ರೇಮ ಸೌಧ ತಾಜ್ ಮಹಲ್ ಗೆ ಭೇಟಿ ನೀಡಿದ್ದಾರೆ. ಇದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪ್ರೀತಿ, ಈ ಹಿಂದೆ ಚಿತ್ರದ ಚಿತ್ರೀಕರಣಕ್ಕಾಗಿ ತಾಜ್ ಮಹಲ್ ಗೆ ಬಂದಿದ್ದು, ಆದರೆ ಇಂದಿನ ಭೇಟಿ ವಿಶೇಷವಾಗಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...