alex Certify
ಕನ್ನಡ ದುನಿಯಾ       Mobile App
       

Kannada Duniya

ಸೈಝ್ ಝೀರೋ ಮಾಡೆಲ್ ಗಳಿಗೆ ಬಿಗ್ ಶಾಕ್

ನ್ಯೂಯಾರ್ಕ್ ನಿಂದ ಲಂಡನ್, ಮಿಲಾನ್ ನಿಂದ ಪ್ಯಾರಿಸ್ ಹೀಗೆ ಎಲ್ಲಾ ಕಡೆ ಈಗ ಫ್ಯಾಷನ್ ಶೋಗಳ ಸುಗ್ಗಿ. ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಮಾತ್ರ ಈ ಬಾರಿ ಮಹತ್ತರ ಬದಲಾವಣೆ ಆಗ್ತಿದೆ. ಪ್ಯಾರಿಸ್ ನ ಫ್ಯಾಷನ್ ಹೌಸ್ ಗಳು ತಮ್ಮ ಶೋಗಾಗಿ ಸೈಝ್ ಝೀರೋ ಮಾಡೆಲ್ ಗಳನ್ನು ನೇಮಕ ಮಾಡಿಕೊಳ್ಳದೇ ಇರಲು ನಿರ್ಧರಿಸಿವೆ.

ಈ ಶಾಕಿಂಗ್ ಸುದ್ದಿ ಫ್ಯಾಷನ್ ಜಗತ್ತನ್ನೇ ಅಲ್ಲಾಡಿಸಿದೆ. ರೂಪದರ್ಶಿಗಳು ಅಗತ್ಯಕ್ಕಿಂತ್ಲೂ ಕಡಿಮೆ ತೂಕ ಹೊಂದಿಲ್ಲ ಎಂಬ ಬಗ್ಗೆ ಪ್ರಮಾಣ ಪತ್ರ ನೀಡಬೇಕೆಂದು ಫ್ರಾನ್ಸ್ ಸರ್ಕಾರ ಹೊಸ ಕಾನೂನನ್ನು ಜಾರಿಗೆ ತಂದಿದೆ. ಅನಾರೋಗ್ಯಕರ ದೇಹ ಪ್ರದರ್ಶನ ಮಾಡುವಂತಿಲ್ಲ ಅಂತಾ ಕಟ್ಟುನಿಟ್ಟಾಗಿ ಹೇಳಿದೆ.

ಹಾಗಾಗಿ ಗೂಸಿ, ಸೇಂಟ್ ಲಾರೆಂಟ್, ಲೂಯಿಸ್ ವಿಟ್ಟೊನ್ ನಂತಹ ಪ್ರಸಿದ್ಧ ಕಂಪನಿಗಳು ಕೂಡ ತಮ್ಮ ಜಾಹೀರಾತುಗಳಿಗೆ ಸೈಝ್ ಝೀರೋ ಮಾಡೆಲ್ ಗಳನ್ನು ಬಳಸಿಕೊಳ್ಳುತ್ತಿಲ್ಲ. ಅಮೆರಿಕದ ಒಂದು ಕಂಪನಿ ಮಾತ್ರ ಸೈಝ್ 2 ಮಾಡೆಲ್ ಗಳನ್ನು ನೇಮಕ ಮಾಡಿಕೊಳ್ತಿದೆ.

XXS ಸೈಝ್ ಗಿಂತ್ಲೂ ಸಣ್ಣಗಿರುವವರನ್ನು ಅಂಡರ್ ವೇಯ್ಟ್ ಅಂತಾ ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ 16 ವರ್ಷದೊಳಗಿನ ರೂಪದರ್ಶಿಗಳ ಬಳಕೆಗೂ ಕಡಿವಾಣ ಹಾಕಲಾಗಿದೆ. ಇದೇ ತಿಂಗಳ 27ರಿಂದ ಪ್ಯಾರಿಸ್ ಫ್ಯಾಷನ್ ವೀಕ್ ಆರಂಭವಾಗ್ತಿದ್ದು, ಸೈಝ್ ಝೀರೋ ಮಾಡೆಲ್ ಗಳನ್ನು ಕಣ್ತುಂಬಿಕೊಳ್ಳಲು ಈ ಬಾರಿ ಸಾಧ್ಯವಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...