alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹುಬಲಿ ಪಾರ್ಟ್ 3 ನೋಡಲು ಸಿದ್ಧವಾಗಿ

ಬಾಹುಬಲಿ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ನೆಟ್ಫ್ಲಿಕ್ಸ್ ನಲ್ಲಿ ಹೊಸ ಸರಣಿ ಶುರುವಾಗ್ತಿದೆ. ಈ ಸರಣಿಯಲ್ಲಿ ಬಾಹುಬಲಿಯ ಮಹಾನ್ ಸಾಮ್ರಾಜ್ಯವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಅವಕಾಶ ಸಿಗ್ತಿದೆ. ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ ಹಾಗೂ ಬಾಹುಬಲಿ 2 ಚಿತ್ರದ ಪ್ರಿಕ್ವೆಲ್ ನಲ್ಲಿ ಶಿವಗಾಮಿನಿ ಜೀವನವನ್ನು ತೋರಿಸಲಾಗುವುದು.

ನೆಟ್ಫ್ಲಿಕ್ಸ್ ಗುರುವಾರ ಇದ್ರ ಘೋಷಣೆ ಮಾಡಿದೆ. ನೆಟ್ಫ್ಲಿಕ್ಸ್ ಗೆ ಈಗಾಗಲೇ ಎರಡು ಆವೃತ್ತಿಯ ಆರ್ಡರ್ ಸಿಕ್ಕಿದೆ. ಬಾಹುಬಲಿ: ದಿ ಬಿಗ್ ನಿಂಗ್ ಹಾಗೂ ಬಾಹುಬಲಿ : ದಿ ಕನ್ಕ್ಲೂಷನ್ಸ್  ನಂತ್ರ ಬರ್ತಿರುವ ಪ್ರಿಕ್ವೆಲ್ ಗೆ ಬಾಹುಬಲಿ ಬಿಫೋರ್ ದ ಬಿಗ್ ನಿಂಗ್ ಎಂದು ಹೆಸರಿಡಲಾಗಿದೆ. ಈ ಪ್ರಿಕ್ವೆಲ್ ಆನಂದ್ ನೀಲಕಂಠನ್ ಅವ್ರ ಪುಸ್ತಕ ದಿ ರೈಸ್ ಆಫ್ ಶಿವಗಾಮಿನಿಯನ್ನು ಆಧರಿಸಿ ತಯಾರಾಗ್ತಿದೆ.

ಸರಣಿಯ ಒಂದು ಆವೃತ್ತಿಯಲ್ಲಿ 9 ಎಪಿಸೋಡ್ ಇರಲಿದೆ. ಬಂಡಾಯ ಹಾಗೂ ಪ್ರತಿಕಾರದ ಹುಡುಗಿ ಬುದ್ಧಿವಂತ ರಾಣಿಯಾಗುವುದು ಹೇಗೆ ಎಂಬುದನ್ನು ಹೇಳಲಾಗುವುದು. ನೆಟ್ಫ್ಲಿಕ್ಸ್ ಅರ್ಕಾ ಮೀಡಿಯಾ ವರ್ಕ್ಸ್ ಹಾಗೂ ರಾಜಮೌಳಿ ತಂಡವೊಂದನ್ನು ರಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...