alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ಲಾ ಈ ನಟಿ…?

ಬಾಲಿವುಡ್ ನ ಸೆಲೆಬ್ರಿಟಿ ಕಪಲ್ ನೇಹಾ ದೂಪಿಯಾ ಮತ್ತು ಅಂಗದ್ ಬೇಡಿ ಹೊಸ ಖುಷಿಯಲ್ಲಿದ್ದಾರೆ. ತಾವಿಬ್ಬರು ಅತಿ ಶೀಘ್ರದಲ್ಲೇ ಅಪ್ಪ-ಅಮ್ಮನಾಗ್ತಿರೋ ವಿಚಾರವನ್ನ ಸಾಮಾಜಿಕ ಜಾಲತಾಣದ ಮೂಲಕ ಅವರು ಹೇಳಿಕೊಂಡಿದ್ದಾರೆ. ನೇಹಾ ದೂಪಿಯಾ ತಮ್ಮ ಬೇಬಿ ಬಂಪ್ ನ ಜೊತೆಗೆ ಪತಿಯನ್ನು ತಬ್ಬಿ ಹಿಡಿದಿರುವ ಫೋಟೋ ಒಂದು ಈಗ ಇನ್ಸ್ಟಾ ಗ್ರಾಮ್ನಲ್ಲಿ ತುಂಬಾನೇ ಸದ್ದು ಮಾಡ್ತಿದೆ.

ಪತ್ನಿಯ ಫೋಟೋ ಜೊತೆಗೆ ಅಂಗದ್ ಬೇಡಿ ಸಂದೇಶವೊಂದನ್ನು ಬರೆದಿದ್ದಾರೆ. ಸುಳ್ಳು ಸುದ್ದಿ ಅಂದುಕೊಂಡಿದ್ದು ನಿಜವಾಗಿದೆ. ನಾವೀಗ ಮೂವರು ಅನ್ನೋ ಲೈನ್ಸ್ ಬರೆದುಕೊಂಡಿದ್ದಾರೆ. ಇದಕ್ಕೆ ಬಾಲಿವುಡ್ ನ ಖ್ಯಾತನಾಮರು ಕೂಡ ಶುಭಾಶಯಗಳನ್ನು ಕೋರಿದ್ದಾರೆ. ನಟಿ ಸೋನಾಕ್ಷಿ ಸಿನ್ಹಾ, ಮಲೈಕಾ ಅರೋರಾ, ನಿರ್ದೇಶಕ ಕರಣ್ ಜೋಹರ್ ಸೇರಿದಂತೆ ಅನೇಕರು ಶುಭಾಶಯಗಳನ್ನ ಕೋರಿದ್ದಾರೆ.

ನೇಹಾ ದೂಪಿಯಾ ಕೂಡ ಇದೇ ಫೋಟೋವನ್ನು ತಮ್ಮ ಇನ್ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಲ್ಲಿಂದ ಹೊಸ ಆರಂಭ ಅನ್ನೋ ಮೆಸೇಜ್ ನೇಹಾ ದೂಪಿಯಾ ಬರೆದುಕೊಂಡಿದ್ದಾರೆ. ನೇಹಾ ದೂಪಿಯಾಗೂ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

2018 ರ ಮೇ ನಲ್ಲಿ ನೇಹಾ ದೂಪಿಯಾ ಮತ್ತು ಅಂಗದ್ ಬೇಡಿ ಗುಟ್ಟಾಗಿ ಮದುವೆಯಾಗಿದ್ದರು. ಕುಟುಂಬದ ಆಪ್ತರ ಹೊರತಾಗಿ ಮತ್ಯಾರಿಗೂ ಅಲ್ಲಿ ಪ್ರವೇಶವಿರಲಿಲ್ಲ. ಆನಂತರದಲ್ಲಿ ಕರಣ್ ಜೋಹರ್ ಇಬ್ಬರ ಮದುವೆ ವಿಚಾರವನ್ನು ಸೋಷಿಯಲ್ ಮೀಡಿಯಾ ಮುಖಾಂತರ ಎಲ್ಲರಿಗೂ ತಿಳಿಸಿದ್ದರು. ಮದುವೆಗೂ ಮುನ್ನವೇ ನೇಹಾ ದೂಪಿಯಾ ಗರ್ಭಿಣಿಯಾಗಿದ್ದ ಹಿನ್ನಲೆಯಲ್ಲಿ ತರಾತುರಿಯಲ್ಲಿ ಈ ಜೋಡಿಯ ಮದುವೆ ನೆರವೇರಿತ್ತು ಎಂಬ ಮಾತುಗಳು ಈಗ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...