alex Certify ನಟಿ ನಯನತಾರಾ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ನಯನತಾರಾ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ನಟಿ ನಯನತಾರಾ ಹುಟ್ಟಿದ್ದು 18 ನವೆಂಬರ್ 1984 ರಲ್ಲಿ ಕೇರಳದ ತಿರುವಲ್ಲ ಎಂಬ ಊರಿನಲ್ಲಿ. ಚಿತ್ರರಂಗಕ್ಕೆ ಬರುವ ಮುನ್ನ ಇವರ ಹೆಸರು ಡಯಾನಾ ಮರಿಯಮ್ ಕುರಿಯನ್ ಎಂದು. 19 ವರ್ಷವಾಗಿದ್ದಾಗ ಮಲೆಯಾಳಂ ಚಿತ್ರವೊಂದರ ಮೂಲಕ ನಯನತಾರಾ ಚಿತ್ರರಂಗ ಪ್ರವೇಶಿಸಿದ್ದಾರೆ.

ಈವರೆಗೂ ಹಲವಾರು ಚಿತ್ರಗಳಲ್ಲಿ ನಟಿಸಿರುವ ನಯನತಾರಾ ಶ್ರೇಷ್ಟ ಅಭಿನಯಕ್ಕಾಗಿ ಹಲವು ಬಾರಿ ‘ಫಿಲ್ಮ್ ಫೇರ್’ ಆವಾರ್ಡ್ ಗಳಿಸಿದ್ದಾರೆ. ನಯನತಾರಾ ಅವರ ತಂದೆ ಮಿಲಿಟರಿ ಅಧಿಕಾರಿಯಾಗಿದ್ದ ಕಾರಣ ಅವರ ಸೇವಾವಧಿಯಲ್ಲಿ ದೇಶದ ಉದ್ದಗಲಕ್ಕೂ ಸುತ್ತಾಡಿದ್ದಾರೆ.

ಇಂಗ್ಲೀಷ್ ಸಾಹಿತ್ಯದಲ್ಲಿ ಪದವಿ ಪಡೆದಿರುವ ನಯನತಾರಾ, ಚಿತ್ರರಂಗಕ್ಕೆ ಬರುವ ಮುನ್ನ ಮಾಡೆಲ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕ್ರಿಶ್ಚಿಯನ್ ಧರ್ಮದವರಾದ ನಯನತಾರಾ, 2011 ರಲ್ಲಿ ಹಿಂದೂ ಧರ್ಮಕ್ಕೆ ಸೇರ್ಪಡೆಗೊಂಡಿದ್ದಾರೆ. ನಯನತಾರಾ ಅವರಿಗೆ ಒಬ್ಬ ಸಹೋದರನೂ ಇದ್ದಾನೆ.

ಕಪ್ಪು ಬಣ್ಣವೆಂದರೆ ಇಷ್ಟಪಡುವ ನಯನತಾರಾ ಅವರಿಗೆ ಸೀರೆಯಲ್ಲಿ ಕಾಣಿಸಿಕೊಳ್ಳುವುದೇ ಚೆಂದವಂತೆ. ಇಷ್ಟದ ನಗರ ಬೆಂಗಳೂರು ಎಂಬುದು ಮತ್ತೊಂದು ವಿಶೇಷ. ಉತ್ತರ ಭಾರತೀಯ ತಿನಿಸುಗಳಂದ್ರೆ ಈಕೆಗೆ ಪಂಚಪ್ರಾಣ. ತಾವು ಮೊದಲು ನಟಿಸಿದ ಮಲೆಯಾಳಿ ಚಿತ್ರವೇ ಆಲ್ ಟೈಮ್ ಫೇವರೆಟ್ ಎಂದು ನಯನತಾರಾ ಹೇಳುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...