alex Certify
ಕನ್ನಡ ದುನಿಯಾ       Mobile App
       

Kannada Duniya

ಕಪಿಲ್ ಶರ್ಮಾ ಶೋ ತೊರೆಯಲಿರುವ ನವಜೋತ್ ಸಿದ್ದು

511168-navjotಮೂರು ದಿಗಳ ಹಿಂದಷ್ಟೇ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ಬಿ.ಜೆ.ಪಿ. ತೊರೆದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಮೂಲಕ ತಮ್ಮ ಹೊಸ ರಾಜಕೀಯ ಇನ್ನಿಂಗ್ಸ್ ಆರಂಭಿಸಲಿದ್ದಾರೆಂದು ಹೇಳಲಾಗಿದೆ.

ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಪ್ರಮುಖ ಪ್ರಚಾರಕರಾಗಿ ಸಿದ್ದು ಕಾರ್ಯ ನಿರ್ವಹಿಸಲಿದ್ದಾರಲ್ಲದೆ ತಮ್ಮ ಪತ್ನಿ ನವಜೋತ್ ಕೌರ್ ಅವರನ್ನು ಆಮ್ ಆದ್ಮಿಯ ಅಭ್ಯರ್ಥಿಯನ್ನಾಗಿಸಲಿದ್ದಾರೆಂದು ತಿಳಿದು ಬಂದಿದೆ.

ಈ ಹಿನ್ನಲೆಯಲ್ಲಿ ಸದ್ಯ ‘ದಿ ಕಪಿಲ್ ಶರ್ಮಾ ಶೋ’ ನಲ್ಲಿ ಪ್ರಮುಖ ಭಾಗವಾಗಿದ್ದ ನವಜೋತ್ ಸಿಂಗ್ ಸಿದ್ದು, ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸಕ್ರಿಯರಾಗಬೇಕಿರುವ ಕಾರಣ ಶೋ ತೊರೆಯಲಿದ್ದಾರೆಂದು ಹೇಳಲಾಗಿದೆ. ‘ಕಾಮಿಡಿ ನೈಟ್ಸ್ ವಿತ್ ಕಪಿಲ್’ ಆರಂಭದಿಂದಲೂ ಕಪಿಲ್ ಶರ್ಮಾ ಜೊತೆಗಿದ್ದ ಸಿದ್ದು, ಈಗಾಗಲೇ ತಾವು ಶೋ ತೊರೆಯುತ್ತಿರುವ ಕುರಿತ ಮಾಹಿತಿಯನ್ನು ಸಂಬಂಧಪಟ್ಟವರಿಗೆ ತಿಳಿಸಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...