alex Certify
ಕನ್ನಡ ದುನಿಯಾ       Mobile App
       

Kannada Duniya

ಕನಸಿನ ಕನ್ಯೆ ಜೀವನ ಚರಿತ್ರೆಗೆ ಮುನ್ನುಡಿ ಬರೆದ ಮೋದಿ

ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಹೇಮಾ ಮಾಲಿನಿ ಅವರ ಜೀವನ ಚರಿತ್ರೆಗೆ ಪ್ರಧಾನಿ ಮೋದಿ ಮುನ್ನುಡಿ ಬರೆದಿದ್ದಾರೆ. ತುಂಬಾ ಚುಟುಕಾದ, ಹರಿತವಾದ ಮತ್ತು ಸಿಹಿಯಾದ ಪದಗಳಲ್ಲಿ ‘ಬಿಯಾಂಡ್ ದಿ ಡ್ರೀಮ್ ಗರ್ಲ್’ ಅನ್ನೋ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.

ಸ್ಟಾರ್ ಡಸ್ಟ್ ಮಾಜಿ ಎಡಿಟರ್ ಹಾಗೂ ನಿರ್ಮಾಪಕ ರಾಮ್ ಕಮಲ್ ಮುಖರ್ಜಿ, ಹೇಮಾ ಮಾಲಿನಿ ಬದುಕನ್ನು ಬರಹದ ರೂಪದಲ್ಲಿ ಹೊರತರುತ್ತಿದ್ದಾರೆ. ಇದೇ ಅಕ್ಟೋಬರ್ 16ರಂದು ಕನಸಿನ ಕನ್ಯೆಯ 69ನೇ ಹುಟ್ಟುಹಬ್ಬ. ಹಾಗಾಗಿ ಅದೇ ದಿನ ಅವರ ಜೀವನ ಚರಿತ್ರೆ ಕೂಡ ಬಿಡುಗಡೆಯಾಗಲಿದೆ.

ಮೋದಿ ಅವರ ಚುಟುಕಾದ ಪ್ರಸ್ತಾವನೆಯನ್ನು ಲೇಖಕ ಮುಖರ್ಜಿ ಮೆಚ್ಚಿಕೊಂಡಿದ್ದಾರೆ. ಕಾರ್ಯನಿರತ ಪ್ರಧಾನಿಯೊಬ್ಬರು ಪುಸ್ತಕಕ್ಕೆ ಮುನ್ನುಡಿ ಬರೆದಿರುವುದು ಇದೇ ಮೊದಲು ಅಂತಾ ಹೇಳಿದ್ದಾರೆ. ಈ ಪುಸ್ತಕ 23 ಚಾಪ್ಟರ್ ಗಳನ್ನು ಹೊಂದಿದೆ.

ಈ ಪುಸ್ತಕದಲ್ಲಿ ಹೇಮಾ ಮಾಲಿನಿ ಅವರ ಬಾಲ್ಯ, ಯೌವ್ವನದ ದಿನಗಳು, ಬಾಲಿವುಡ್, ರೊಮ್ಯಾನ್ಸ್, ಸಹೋದ್ಯೋಗಿಗಳು, ಮದುವೆ, ಸೆಕೆಂಡ್ ಇನ್ನಿಂಗ್ಸ್, ರಾಜಕೀಯ ಪಯಣ, ಧಾರ್ಮಿಕ ಪಯಣ ಎಲ್ಲಾ ವಿವರಗಳೂ ಇವೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...