alex Certify
ಕನ್ನಡ ದುನಿಯಾ       Mobile App
       

Kannada Duniya

ನಿರ್ದೇಶಕ ಎಸ್. ನಾರಾಯಣ್ ಗೆ ವಂಚನೆ: ಮೂವರ ಬಂಧನ

ಕಲಾಸಾಮ್ರಾಟ್ ನಿರ್ದೇಶಕ ಎಸ್. ನಾರಾಯಣ್ ಅವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ಹೇಳಿ 43 ಲಕ್ಷ ರೂ. ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಶವಂತಪುರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ತಮಿಳುನಾಡು ಮೂಲದ ಗೋವಿಂದರಾಜು (40), ರಮೇಶ್ (45), ಸಂತಾನ ಕೃಷ್ಣ (45) ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿಗಳಾದ ಬಾಲಸುಬ್ರಹ್ಮಣ್ಯಂ ಹಾಗೂ ಮಂದಾರ ಮೂರ್ತಿ ಎಂಬುವವರು ತಲೆಮರೆಸಿಕೊಂಡಿದ್ದಾರೆ.

ನಿರ್ದೇಶಕ ಎಸ್. ನಾರಾಯಣ್, ಸಿನಿಮಾ ಪ್ರಾಜೆಕ್ಟ್ ಗಾಗಿ 50 ಕೋಟಿ ರೂ. ಸಾಲ ಪಡೆಯಲು ನಿರ್ಧರಿಸಿ ಬ್ಯಾಂಕ್ ಒಂದರಲ್ಲಿ ವಿಚಾರಿಸಿದ್ದರು. ಈ ವೇಳೆ ತಮಿಳುನಾಡಿನ ಮಂದಾರ ಮೂರ್ತಿ ಎಂಬಾತನ ಪರಿಚಯವಾಗಿ, ಕಡಿಮೆ ಬಡ್ಡಿಗೆ 70 ಲಕ್ಷ ರೂ. ಸಾಲ ಕೊಡಿಸುವುದಾಗಿ ಹೇಳಿದ.

ಅದನ್ನು ನಂಬಿದ ಎಸ್ ನಾರಾಯಣ್, ಸಾಲ ಪಡೆಯಲು ಮುಂಗಡ ಶುಲ್ಕವಾಗಿ ಆರೋಪಿ ಮಂದಾರ ಮೂರ್ತಿಗೆ 43 ಲಕ್ಷ ರೂ. ಹಣ ನೀಡಿದ್ದರು. ಸಾಲ ನೀಡುವ ನೆಪದಲ್ಲಿ 50 ಕೋಟಿ ರೂ. ಮೌಲ್ಯದ ಡಿಡಿ ಯನ್ನು ಆತ ಎಸ್. ನಾರಾಯಣ್ ಹೆಸರಿಗೆ ನೀಡಿದ್ದ. ಆದರೆ ದಿನ ಕಳೆದಂತೆ ಆರೋಪಿಗಳು ನೀಡಿದ್ದ ಡಿಡಿ ನಕಲಿ ಎಂದು ತಿಳಿದಿದೆ. ಆರೋಪಿಗಳನ್ನು ಸಂಪರ್ಕಿಸುವ ಯತ್ನ ನಡೆಸಿದರೆ ಅವರಾರೂ ಸಂಪರ್ಕಕ್ಕೆ ಸಿಗಲಿಲ್ಲ. ಇದರಿಂದ ನಿರ್ದೇಶಕ ಎಸ್. ನಾರಾಯಣ್ ದೂರು ನೀಡಿದ್ದು, ಈಗಾಗಲೇ ಮೂರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಇನ್ನಿಬ್ಬರ ಬಂಧನಕ್ಕಾಗಿ ಜಾಲ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...