alex Certify
ಕನ್ನಡ ದುನಿಯಾ       Mobile App
       

Kannada Duniya

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಹುಭಾಷಾ ನಟಿ ನಮಿತಾ

ಬಹುಭಾಷಾ ನಟಿ ನಮಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿರ್ಮಾಪಕ ವೀರೇಂದ್ರ ಚೌಧರಿ ಜೊತೆ ನಮಿತಾ ಹೊಸ ಜೀವನ ಶುರುಮಾಡಿದ್ದಾರೆ. ತಿರುಪತಿಯಲ್ಲಿ ಮದುವೆ ಸಮಾರಂಭ ನಡೆದಿದೆ.

ಶುಕ್ರವಾರ ಬೆಳಿಗ್ಗೆ 5.30ರ ಮುಹೂರ್ತದಲ್ಲಿ ತಮಿಳು ನಟ ಹಾಗೂ ನಿರ್ಮಾಪಕ ವೀರೇಂದ್ರ ಚೌಧರಿ ಹಾಗೂ ನಮಿತಾ ಮದುವೆ ನೆರವೇರಿದೆ. ನಮಿತಾ ಗುಲಾಬಿ ಬಣ್ಣದ ಸೀರೆಯುಟ್ಟಿದ್ದರೆ ವೀರೇಂದ್ರ ಶೇರ್ವಾನಿ ಧರಿಸಿದ್ದರು. ನಟ ಶರತ್ ಕುಮಾರ್ ಹಾಗೂ ಪತ್ನಿ ರಾಧಿಕಾ ಕೂಡ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ನವೆಂಬರ್ 22ರಂದು ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮ ನಡೆದಿತ್ತು. ಆರತಕ್ಷತೆ ಕಾರ್ಯಕ್ರಮ ಚೆನ್ನೈನಲ್ಲಿ ನಡೆಯಲಿದೆ. 2016ರಲ್ಲಿ ನಮಿತಾ ಹಾಗೂ ವೀರೇಂದ್ರ ಚೌಧರಿ ಭೇಟಿಯಾಗಿತ್ತು. ಶಶಿಧರ್ ಬಾಬು ನಮಿತಾರಿಗೆ ವೀರೇಂದ್ರ ಚೌಧರಿಯವರನ್ನು ಭೇಟಿ ಮಾಡಿಸಿದ್ದರು.

ಸೆಪ್ಟೆಂಬರ್ 6, 2017ರಂದು ವೀರೇಂದ್ರ ನಮಿತಾರಿಗೆ ಪ್ರೇಮ ನಿವೇದನೆ ಮಾಡಿದ್ದರಂತೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...