alex Certify
ಕನ್ನಡ ದುನಿಯಾ       Mobile App
       

Kannada Duniya

ನಾಗಾರ್ಜುನ ಚಿತ್ರಕ್ಕೆ ‘ಟಗರು’ ಸೂರಿ ನಿರ್ದೇಶನ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಬಿಡುಗಡೆಯಾದಲ್ಲೆಲ್ಲಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಶಿವರಾಜ್ ಕುಮಾರ್, ಮಾನ್ವಿತಾ, ಧನಂಜಯ ಅವರ ಅಭಿನಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ನಿರ್ದೇಶಕ ಸೂರಿ ಮತ್ತು ಚಿತ್ರತಂಡದವರೊಂದಿಗೆ ಬೆಂಗಳೂರಿನಲ್ಲಿ ‘ಟಗರು’ ಚಿತ್ರ ವೀಕ್ಷಿಸಿದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ತಮ್ಮ ಮುಂದಿನ ಚಿತ್ರದಲ್ಲಿ ಮಾನ್ವಿತಾ ಅವರಿಗೆ ಅವಕಾಶ ನೀಡಲಾಗುವುದು. ಅವರು ಕೇಳಿದ್ದಕ್ಕಿಂತ ಜಾಸ್ತಿ ಸಂಭಾವನೆ ಕೊಡಲಾಗುವುದು ಎಂದು ವರ್ಮಾ ಹೇಳಿದ್ದಾರೆ. ಇದೇ ವೇಳೆ ತಮ್ಮ ಬ್ಯಾನರ್ ನಲ್ಲಿ ಚಿತ್ರ ನಿರ್ದೇಶಿಸುವಂತೆ ಸೂರಿ ಅವರಿಗೆ ವರ್ಮಾ ಹೇಳಿದ್ದಾರೆ.

ಇದಕ್ಕೆ ಸೂರಿ ಒಪ್ಪಿ ಶಿವರಾಜ್ ಕುಮಾರ್, ರಾಧಿಕಾ ಪಂಡಿತ್ ಅಭಿನಯಿಸಿದ್ದ ಭರ್ಜರಿ ಯಶಸ್ವಿ ಚಿತ್ರ ‘ಕಡ್ಡಿಪುಡಿ’ ಚಿತ್ರದ ಬಗ್ಗೆ ತಿಳಿಸಿದ್ದಾರೆ. ಇದನ್ನು ತೆಲುಗಿನಲ್ಲಿ ರಿಮೇಕ್ ಮಾಡಲು ರಾಮ್ ಗೋಪಾಲ್ ವರ್ಮಾ ಒಪ್ಪಿದ್ದು, ಶಿವರಾಜ್ ಕುಮಾರ್ ನಿರ್ವಹಿಸಿದ ಪಾತ್ರವನ್ನು ಅಕ್ಕಿನೇನಿ ನಾಗಾರ್ಜುನ ಅವರಿಂದ ಮಾಡಿಸುವುದಾಗಿ ಹೇಳಿದ್ದಾರೆ. ನಾಗಾರ್ಜುನ ಡೇಟ್ಸ್ ಸಿಕ್ಕಲ್ಲಿ ತೆಲುಗಿನಲ್ಲಿ ಸೂರಿ ನಿರ್ದೇಶನದಲ್ಲಿ ‘ಕಡ್ಡಿಪುಡಿ’ ಮೂಡಿ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...