alex Certify
ಕನ್ನಡ ದುನಿಯಾ       Mobile App
       

Kannada Duniya

ಹಾವಿನೊಂದಿಗೆ ಸರಸವಾಡಿದ ನಟಿ ಅರೆಸ್ಟ್

havu

ಥಾಣೆ: ಹಾವಿನೊಂದಿಗೆ ಆಟವಾಡುವ ದೃಶ್ಯಗಳನ್ನು, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ನಟಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ನಾಗಾರ್ಜುನ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಖ್ಯಾತ ನಟಿ ಶ್ರುತಿ ಉಲ್ಫತ್ ಸೇರಿದಂತೆ, ನಾಲ್ವರನ್ನು ಥಾಣೆ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಬೊಲಿವಿರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವಿಚಾರಣೆ ನಡೆಸಿದ ನ್ಯಾಯಾಲಯ, ಫೆಬ್ರವರಿ 16 ರ ವರೆಗೆ ಜೈಲು ಶಿಕ್ಷೆ ವಿಧಿಸಿದೆ. ಶ್ರುತಿ ಉಲ್ಫತ್ ‘ನಾಗಾರ್ಜುನ’ ಧಾರಾವಾಹಿ ಚಿತ್ರೀಕರಣಕ್ಕೆ ತರಲಾಗಿದ್ದ ನಾಗರಹಾವನ್ನು ಕೈಯಲ್ಲಿಡಿದು ಆಟವಾಡಿಸಿದ್ದಾರೆ.

ಈ ದೃಶ್ಯಗಳನ್ನೆಲ್ಲಾ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಳಿಗೂ ದೂರು ನೀಡಲಾಗಿತ್ತು.

ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಜೀವಂತ ಹಾವನ್ನು ಚಿತ್ರೀಕರಣಕ್ಕೆ ಬಳಸುವುದು ಅಪರಾಧವಾಗಿದ್ದು, ಈ ಹಿನ್ನಲೆಯಲ್ಲಿ ಶ್ರುತಿ ಉಲ್ಫತ್ ಹಾಗೂ ಇತರರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...