alex Certify
ಕನ್ನಡ ದುನಿಯಾ       Mobile App
       

Kannada Duniya

ತೆರೆ ಮೇಲೆ ಮತ್ತೆ ಬರಲಿದೆ ‘ನಾಗರಹಾವು’

ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ನಾಗರಹಾವು’ ಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ. 1973ರಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರ ಭರ್ಜರಿ ಯಶಸ್ಸು ಗಳಿಸಿತ್ತಲ್ಲದೇ ರಾಮಾಚಾರಿಯಾಗಿ ಕಾಣಿಸಿಕೊಂಡಿದ್ದ ವಿಷ್ಣುವರ್ಧನ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಒಂದು ಶಾಶ್ವತ ಸ್ಥಾನವನ್ನು ಕಲ್ಪಿಸಿಕೊಟ್ಟಿತ್ತು.

ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರವನ್ನು ಈಶ್ವರಿ ಪ್ರೊಡಕ್ಷನ್ ವತಿಯಿಂದ ವೀರಸ್ವಾಮಿಯವರು ನಿರ್ಮಿಸಿದ್ದು, ಅಂಬರೀಶ್, ಆರತಿ, ಅಶ್ವಥ್, ಶಿವರಾಂ ಮೊದಲಾದವರು ನಟಿಸಿದ್ದರು.

ಇದೀಗ ಈ ಚಿತ್ರವನ್ನು ಮತ್ತೆ ರಿಲೀಸ್ ಮಾಡಲು ಈಶ್ವರಿ ಪ್ರೊಡಕ್ಷನ್ ನ ಬಾಲಾಜಿ ವೀರಸ್ವಾಮಿ ನಿರ್ಧರಿಸಿದ್ದು, ಇಂದಿನ ದಿನಮಾನಕ್ಕೆ ತಕ್ಕಂತೆ ಡಿ ಟಿ ಎಸ್ ಹಾಗೂ ಸಿನಿಮಾಸ್ಕೋಪ್ ಅಳವಡಿಸಿಕೊಳ್ಳಲಾಗುತ್ತಿದೆ. ಶೀಘ್ರದಲ್ಲೇ ‘ನಾಗರಹಾವು’ ಚಿತ್ರ ತೆರೆ ಮೇಲೆ ಬರಲಿದ್ದು, ಚಿತ್ರ ರಸಿಕರು ಕಣ್ತುಂಬಿಕೊಳ್ಳಲು ಕಾದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...