alex Certify
ಕನ್ನಡ ದುನಿಯಾ       Mobile App
       

Kannada Duniya

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್ ಜೋಡಿ

ಟಾಲಿವುಡ್ ನ ಅಚ್ಚು ಮೆಚ್ಚಿನ ಜೋಡಿ ನಾಗ ಚೈತನ್ಯ ಹಾಗೂ ಸಮಂತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 7 ವರ್ಷಗಳ ಕಾಲ ಪ್ರೀತಿಸುತ್ತಿದ್ದ ಜೋಡಿ ಈಗ ದಂಪತಿಯಾಗಿ ಹೊಸ ಜೀವನ ಶುರುಮಾಡಿದ್ದಾರೆ. ಅಕ್ಟೋಬರ್ 6ರಂದು ಹಿಂದೂ ಸಂಪ್ರದಾಯದಂತೆ ಮದುವೆ ನೆರವೇರಿದೆ.

ಅಕ್ಟೋಬರ್ 7ರಂದು ಸಂಜೆ ಗೋವಾದಲ್ಲಿ ಅದ್ಧೂರಿಯಾಗಿ ಕ್ರಿಶ್ಚಿಯನ್ ಪದ್ಧತಿಯಲ್ಲಿ ಮದುವೆ ನಡೆಯಲಿದೆ. ಹಿಂದೂ ಪದ್ಧತಿಯಂತೆ ನಡೆದ ಮದುವೆಯಲ್ಲಿ ನಾಗ ಚೈತನ್ಯ ಕುರ್ತಾ ಧರಿಸಿದ್ದರು. ಸಮಂತಾ ಬಂಗಾರ ಬಣ್ಣದ ಸೀರೆಯುಟ್ಟಿದ್ದರು. ವಧುವಿನ ಡ್ರೆಸ್ ನಲ್ಲಿ ಸಮಂತಾ ಸುಂದರವಾಗಿ ಕಾಣ್ತಿದ್ದಳು.

ಕ್ಯಾಥೋಲಿಕ್ ಪದ್ಧತಿಯಂತೆ ಮದುವೆ ನಡೆದ ನಂತ್ರ ಅಕ್ಟೋಬರ್ 9ರಂದು ಹೈದ್ರಾಬಾದ್ ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಟಾಲಿವುಡ್ ನ ಸ್ಟಾರ್ ಕಲಾವಿದರು ಈ ಕಾರ್ಯಕ್ರಮಕ್ಕೆ ಬಂದು ವಧು-ವರರನ್ನು ಆಶೀರ್ವದಿಸಲಿದ್ದಾರೆ. ಸುಮಾರು 150 ಮಂದಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಇದಕ್ಕಾಗಿ 10 ಕೋಟಿ ಖರ್ಚು ಮಾಡಲಿದೆ ಎಂದು ಮೂಲಗಳು ಹೇಳಿವೆ.

ಮದುವೆ ಸಮಾರಂಭದ ನಂತ್ರ ಇಬ್ಬರೂ ಬಾಕಿ ಉಳಿದ ಕೆಲಸವನ್ನು ಪೂರ್ಣಗೊಳಿಸಲಿದ್ದಾರೆ. ನಂತ್ರ ಇಬ್ಬರೂ ಅಮೆರಿಕಾಕ್ಕೆ ಹನಿಮೂನ್ ಗೆ ಹೋಗಲಿದ್ದಾರೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...