alex Certify
ಕನ್ನಡ ದುನಿಯಾ       Mobile App
       

Kannada Duniya

ಜುಲೈ 20 ರಿಂದ ತೆರೆ ಮೇಲೆ ರಾಮಾಚಾರಿ ಹವಾ…!

ಸಾಹಸಸಿಂಹ ವಿಷ್ಣುವರ್ಧನ ಹಾಗೂ ಅಂಬರೀಷ್​ ಅಭಿನಯದ ಸೂಪರ್ ಹಿಟ್ ಚಲನಚಿತ್ರ ನಾಗರಹಾವು, ಹೊಸ ರೂಪದಲ್ಲಿ ಅಭಿಮಾನಿಗಳನ್ನು ಸೆಳೆಯಲಿದೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರ ಮತ್ತೆ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ಚಿತ್ರಕ್ಕೆ ತಾಂತ್ರಿಕ ಟಚ್ ನೀಡಲಾಗಿದ್ದು, ಜುಲೈ 20 ರಂದು ಚಿತ್ರ ರಿ-ರಿಲೀಸ್​ ಆಗಲಿದೆ.

ರವಿಚಂದ್ರನ್‌ ಸಹೋದರ ಬಾಲಾಜಿ ಈ ಚಿತ್ರಕ್ಕೆ ಹೊಸದಾಗಿ ಕಲರಿಂಗ್‌ ಮಾಡಿಸಿದ್ದು ತೆರೆಯ ಮೇಲೆ ಅದ್ಭುತವಾಗಿ ಕಾಣಲಿದೆ. ನಾಗರಹಾವು ಚಿತ್ರವನ್ನು ಈಗ, ಸಿನಿಮಾ ಸ್ಕೋಪ್‌ ಮತ್ತು 7.1 ಡಿಟಿಎಸ್‌ ಸೌಂಡ್‌ ಎಫೆಕ್ಟ್‌ನಲ್ಲಿ ನೋಡಬಹುದಾಗಿದೆ. ಅಲ್ಲದೆ ಹೊಸ ತಂತ್ರಜ್ಞಾನದಲ್ಲಿ ರಿ ರೆಕಾರ್ಡಿಂಗ್ ಕಾರ್ಯ ಸಹ ಆಗಿದೆ.

ಈಗಾಗಲೇ ರಿಲೀಸ್ ಆಗಿರುವ ನಾಗರಹಾವು ಟೀಸರ್ ಭಾರೀ ಸದ್ದು ಮಾಡ್ತಿದೆ. ಸೂಪರ್​ ಹಿಟ್​​ ಚಿತ್ರವನ್ನು ಮತ್ತೊಮ್ಮೆ ಕಣ್ಣು ತುಂಬಿಕೊಳ್ಳಲು ಕನ್ನಡಿಗರು ಕಾತುರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...