alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಮೈತ್ರಿಯಾಗೌಡ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

mythriya-gowda

ಕೇಂದ್ರ ಸಚಿವ ಡಿ. ವಿ. ಸದಾನಂದಗೌಡರ ಪುತ್ರ, ಕಾರ್ತಿಕ್ ಗೌಡ ಅವರನ್ನು ಮದುವೆಯಾಗಿದ್ದೇನೆ ಎಂದು ಹೇಳುವ ಮೂಲಕ, ಸಂಚಲನ ಸೃಷ್ಟಿಸಿದ್ದ ನಟಿ ಮೈತ್ರಿಯಾ ಗೌಡ ವಿವಾದಗಳಿಂದ ದೂರವಾಗಿದ್ದು, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಕುರಿತ ಮತ್ತೊಂದು ವಿಶೇಷ ಮಾಹಿತಿ ಇಲ್ಲಿದೆ ನೋಡಿ.

ಮೈತ್ರಿಯಾ ಗೌಡ ‘ಅಕ್ಷತೆ’ ಮತ್ತು ‘ಲವ್ ಇನ್ ಎನ್.ಹೆಚ್.4’ ಸಿನಿಮಾಗಳಲ್ಲಿ ಅಭಿನಯಸಿದ ನಂತರ ಬಾಲಿವುಡ್ ನತ್ತ ಮುಖ ಮಾಡಿದ್ದಾರೆ. ‘ಶ್ರಾಪ್’ ಎಂಬ ಹಾರರ್ ಸಿನೆಮಾ ಮೂಲಕ ಮೈತ್ರಿಯಾ ಗೌಡ, ಬಾಲಿವುಡ್ ನಲ್ಲೂ ಮಿಂಚಲಿದ್ದಾರೆ. ಈ ಕುರಿತಂತೆ ಅವರೇ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ್ದು, ಬಾಲಿವುಡ್ ಸಿನೆಮಾದಲ್ಲಿ ನಟಿಸುತ್ತಿರುವುದು ಖುಷಿ ತಂದಿದೆ ಎಂದು ತಿಳಿಸಿದ್ದಾರೆ. 100 ನಟಿಯರ ಸ್ಕ್ರೀನ್ ಟೆಸ್ಟ್ ನಲ್ಲಿ ನಾನು ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.

ಬಾಲಿವುಡ್ ನಲ್ಲಿ ‘ಪಾಂಚ್ ಗಂಟೆ ಮೆ ಪಾಂಚ್ ಕ್ರೋರ್’ ಹಾಗೂ ‘ಮೈ ಹೂ ರಜನಿಕಾಂತ್’ ಸಿನೆಮಾ ನಿರ್ದೇಶನ ಮಾಡಿದ್ದ ಫೈಸಲ್ ಸೈಫ್ ಅವರು ಹಾರರ್ ಚಿತ್ರ ‘ಶ್ರಾಪ್’ಗೆ ನಿರ್ದೇಶಕರಾಗಿದ್ದಾರೆ. ನೀಲಂ ಶರ್ಮ ಎಂಟರ್ ಟೈನ್ ಮೆಂಟ್ ಸಂಸ್ಥೆ ಚಿತ್ರ ನಿರ್ಮಾಣ ಮಾಡಿದೆ. ಮೈತ್ರಿಯಾ ಗೌಡ ಬಾಲಿವುಡ್ ಗೆ ಭರ್ಜರಿಯಾಗಿಯೇ ಎಂಟ್ರಿ ಕೊಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...