alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಯನ ಲೋಕಕ್ಕೆ ನಿವೃತ್ತಿ ಘೋಷಿಸಿದ ಗಾನಕೋಗಿಲೆ

ಮೈಸೂರು: ಖ್ಯಾತ ಗಾಯಕಿ ಎಸ್. ಜಾನಕಿ ಗಾಯನ ಲೋಕಕ್ಕೆ ವಿದಾಯ ಹೇಳಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿ ಸಭಾಂಗಣದಲ್ಲಿ ನಡೆದ ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಅವರಿಗೆ ಬೀಳ್ಕೊಡುಗೆ ನೀಡಲಾಗಿದೆ.

6 ದಶಕಗಳ ಕಾಲ ಗಾಯನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು ಸುಮಾರು 40,000 ಗೀತೆಗಳನ್ನು ಹಾಡಿದ್ದಾರೆ. 1957 ರಲ್ಲಿ ‘ವಿಧಿಯಾನ್ ವಿಳಿಯಾಟ್ಟು’ ತಮಿಳು ಚಿತ್ರದಲ್ಲಿ ಹಾಡುವ ಮೂಲಕ ಗಾಯನ ಲೋಕ ಪ್ರವೇಶಿಸಿದ ಅವರು ಅದೇ ವರ್ಷ ‘ಶ್ರೀಕೃಷ್ಣಗಾರುಡಿ’ ಕನ್ನಡ ಚಿತ್ರದಲ್ಲಿ ಹಾಡಿದ್ದರು.

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮಾತ್ರವಲ್ಲ ಸಿಂಹಳ, ಜಪಾನ್, ಅರೇಬಿಕ್, ಲ್ಯಾಟಿನ್ ಸೇರಿದಂತೆ 17 ಭಾಷೆಗಳಲ್ಲಿ ಅವರು ಹಾಡಿದ್ದಾರೆ. ಮಿಮಿಕ್ರಿ, ಮಕ್ಕಳ ವಾಯ್ಸ್ ಸೇರಿ ಒಂದೇ ಹಾಡಿನಲ್ಲಿ 3 ವಾಯ್ಸ್ ಗಳಲ್ಲಿ ಹಾಡುವ ಕಲೆಗಾರಿಕೆ ಹೊಂದಿದ್ದಾರೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾದ ಜಾನಕಿ ಅವರು ಹಲವಾರು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಗಾಯನ ಲೋಕಕ್ಕೆ ನಿವೃತ್ತಿ ಘೋಷಿಸುವ ನಿರ್ಧಾರವನ್ನು ಮೊದಲೇ ತಿಳಿಸಿದ್ದ ಅವರು, ಮೈಸೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮವೇ ತಮ್ಮ ಕೊನೆಯ ಕಾರ್ಯಕ್ರಮವಾಗಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...