alex Certify
ಕನ್ನಡ ದುನಿಯಾ       Mobile App
       

Kannada Duniya

ಗೌತಮಿ ಜೊತೆಗಿನ ಬ್ರೇಕಪ್ ಕುರಿತು ಕಮಲ್ ಹೇಳಿದ್ದೇನು?

kamal-gautami-subbulaksmi13 ವರ್ಷಗಳಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಖ್ಯಾತ ನಟ ಕಮಲ್ ಹಾಸನ್ ಹಾಗೂ ಗೌತಮಿ ಈಗ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತೆನ್ನಲಾಗಿದ್ದು, ಇದೀಗ ನಟಿ ಗೌತಮಿ ಅದನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ತಮ್ಮ ಬ್ಲಾಗ್ ನಲ್ಲಿ ಸುದೀರ್ಘವಾಗಿ ಈ ಕುರಿತು ಬರೆದುಕೊಂಡಿದ್ದ ಗೌತಮಿ, ತಾವಿಬ್ಬರು ಬೇರೆಯಾಗಿದ್ದರೂ ತಾವು ಹಿಂದಿನಂತೆ ಈಗಲೂ ಕಮಲ್ ಹಾಸನ್ ರ ಅಭಿಮಾನಿ ಎಂದು ಹೇಳಿಕೊಂಡಿದ್ದರು. ಗೌತಮಿ ರಾಜಕೀಯ ಸೇರ್ಪಡೆಗೊಳ್ಳಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಅವರು ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಕಮಲ್ ಹಾಸನ್ ಹಾಗೂ ಗೌತಮಿ ತಮ್ಮ ಲಿವ್ ಇನ್ ರಿಲೇಶನ್ ಶಿಪ್ ಸಂಬಂಧವನ್ನು ಅಂತ್ಯಗೊಳಿಸುತ್ತಿದ್ದಂತೆಯೇ ಇದಕ್ಕೆ ಕಮಲ್ ಹಾಸನ್ ರ ಪ್ರತಿಕ್ರಿಯೆ ಏನಿರಬಹುದೆಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಕಮಲ್, ಈಗ ಆ ಕುತೂಹಲಗಳಿಗೆ ತೆರೆ ಎಳೆದಿದ್ದಾರೆ. ಈ ಸಂದರ್ಭದಲ್ಲಿ ನನ್ನ ಭಾವನೆ ಏನೆಂಬುದು ಮುಖ್ಯವಲ್ಲ ಗೌತಮಿ ಹಾಗೂ ಆಕೆಯ ಮಗಳು ಸುಬ್ಬುಲಕ್ಷ್ಮಿ ಸಂತೋಷದಿಂದಿರುವುದು ಮುಖ್ಯ. ಅವರಿಬ್ಬರ ಜೀವನ ಸುಖಕರವಾಗಿರಲಿ ಎಂದು ಹಾರೈಸಿದ್ದಾರಲ್ಲದೇ ತಮಗೆ ಶೃತಿ, ಅಕ್ಷರಾ ಹಾಗೂ ಸುಬ್ಬುಲಕ್ಷ್ಮಿ ಮೂವರೂ ಮಕ್ಕಳಾಗಿದ್ದು, ವಿಶ್ವದ ಅದೃಷ್ಟಶಾಲಿ ತಂದೆ ತಾನೆಂದು ಭಾವಿಸುವುದಾಗಿ ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...