alex Certify
ಕನ್ನಡ ದುನಿಯಾ       Mobile App
       

Kannada Duniya

ಎಂಎಂಸಿಎಚ್ ಚಿತ್ರದಲ್ಲಿನ ತಮ್ಮ ಪಾತ್ರದ ಗುಟ್ಟು ಬಿಚ್ಚಿಟ್ಟ ರಾಗಿಣಿ

ರಾಗಿಣಿ ಐಪಿಎಸ್ ಚಿತ್ರದಲ್ಲಿ ಖಾಕಿ ಧರಿಸಿ ಕಾಪ್ ಆಗಿ ಕಾಣಿಸಿಕೊಂಡಿದ್ದ ಸ್ಯಾಂಡಲ್ ವುಡ್ ಅರಗಿಣಿ ರಾಗಿಣಿ ಮತ್ತೆ ಸೂಪರ್ ಕಾಪ್ ಆಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಎಂಎಂಸಿಎಚ್. ಚಂದನವನದ ತಾರಾ ನಟಿಯರ ಪುತ್ರಿಯರು ಅಭಿನಯಿಸಿರುವ ಸಿನಿಮಾ ಈಗಾಗ್ಲೇ ಟ್ರೇಲರ್ ಮತ್ತು ಮೇಕಿಂಗ್ ನಿಂದಾಗಿ ಗಮನ ಸೆಳೆಯುತ್ತಿದೆ. ಬಿಡುಗಡೆಯ ಹೊಸ್ತಿಲಲ್ಲಿರುವ ಸಿನಿಮಾದ ಪಾತ್ರದ ಬಗ್ಗೆ ನಟಿ ರಾಗಿಣಿ ಇಂಟರೆಸ್ಟಿಂಗ್ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

ಎಂಎಂಸಿಎಚ್ ಚಿತ್ರದಲ್ಲಿನ ಸೂಪರ್ ಕಾಪ್ ಪಾತ್ರವನ್ನ ಜನರು ಹೇಗೆ ಸ್ವೀಕರಿಸ್ತಾರೆ ಅನ್ನೋದ್ರ ಬಗ್ಗೆ ರಾಗಿಣಿ ತುಂಬಾನೇ ಎಕ್ಸೈಟಿಂಗ್ ಆಗಿದ್ದಾರಂತೆ. ಝಾನ್ಸಿ ರಾಣಿ ಎಂಬ ಪೊಲೀಸ್ ಅಧಿಕಾರಿಯ ಪಾತ್ರ ಕೇವಲ ಸಿನಿಮಾಗಾಗಿ ಸೃಷ್ಟಿ ಮಾಡಲಾದ ಪಾತ್ರವಲ್ಲ. ಅಸಲಿ ಪೊಲೀಸ್ ಅಧಿಕಾರಿಯ ಪಾತ್ರವಾಗಿದೆ ಎಂದಿದ್ದಾರೆ ರಾಗಿಣಿ.

ಆ ಪಾತ್ರ ಪೋಷಣೆ ಮಾಡಿದ್ದಕ್ಕೆ ತನಗೆ ಖುಷಿ ಇದೆ. ನಾನು ನಿರ್ವಹಿಸಿದ ಪಾತ್ರ ನಿಜ ಜೀವನದಲ್ಲಿ ಪುರುಷ ಪೊಲೀಸ್ ಅಧಿಕಾರಿಯೊಬ್ಬರ ರಿಯಲ್ ಲೈಫ್ ಗೆ ಸಂಬಂಧಿಸಿದ್ದು. ನೈಜ ಘಟನೆಗಳ ಮೇಲೆ ಸಿನಮಾದ ಕಥೆ ಹೆಣೆಯಲಾಗಿದ್ದು, ತೆರೆಯ ಮೇಲೆ ಕೆಲ ಸಮಯವಷ್ಟೇ ಬರುವ ತನ್ನ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಾಲ್ವರು ನಾಯಕಿಯರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದು ಅವರಿಗೆ ಖುಷಿ ಕೊಟ್ಟಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...