alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ಮ್ಯಾರಥಾನ್ ನಲ್ಲಿ ತಾರೆಯರ ರಂಗು

ಮುಂಬೈನಲ್ಲಿ ನಡೆದ ಮ್ಯಾರಥಾನ್ ನಲ್ಲಿ ಬಾಲಿವುಡ್ ತಾರೆಯರು ಪಾಲ್ಗೊಳ್ಳುವ ಮೂಲಕ ಆರೋಗ್ಯ ಕುರಿತ ಜಾಗೃತಿಯನ್ನು ಪ್ರಚುರಪಡಿಸಿದ್ದಾರೆ. ಬಾಲಿವುಡ್ ಖ್ಯಾತನಾಮರು ಇದರಲ್ಲಿ ಭಾಗವಹಿಸುವ ಮೂಲಕ ಸ್ಪರ್ಧೆಗೆ ಮತ್ತಷ್ಟು ರಂಗು ತಂದಿದ್ದಾರೆ.

ತಮ್ಮ 53 ನೇ ವಯಸ್ಸಿನಲ್ಲೂ ಫಿಟ್ನೆಸ್ ಕುರಿತ ಜಾಗೃತಿಯಲ್ಲಿ ಸಕ್ರಿಯರಾಗಿರುವ ನಟ ಮಿಲಿಂದ್ ಸೋಮನ್ ಗೋವಾದಿಂದ ಮುಂಬೈವರೆಗೆ ಕಾಲ್ನಡಿಗೆಯಲ್ಲೇ ಕ್ರಮಿಸಿದ್ದರು. ಈ ಸಂದರ್ಭದಲ್ಲಿ ಸ್ವಲ್ಪ ದೂರ ಅವರ ತಾಯಿಯೂ ಸಾಥ್ ನೀಡಿದ್ದರು. ಮುಂಬೈ ಮ್ಯಾರಥಾನ್ ನಲ್ಲೂ ಮಿಲಿಂದ್ ಸೋಮನ್ ಪಾಲ್ಗೊಂಡು ತಮ್ಮ ಕಾರ್ಯ ಮುಂದುವರೆಸಿದ್ದಾರೆ.

ನಟ ಮಿಲಿಂದ್ ಸೋಮನ್ ಮಾತ್ರವಲ್ಲ. ನಟಿ ಕಾಜೋಲ್ ಅಗರ್ವಾಲ್, ನಟ ರಾಹುಲ್ ಬೋಸ್, ನಿರೂಪಕಿ ಮಂದಿರಾ ಬೇಡಿ, ತಾರಾ ಶರ್ಮಾ ಸೇರಿದಂತೆ ಹತ್ತಾರು ಸೆಲೆಬ್ರಿಟಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ.

ಚಿತ್ರ ಕೃಪೆ: deccanchronicle

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...