alex Certify
ಕನ್ನಡ ದುನಿಯಾ       Mobile App
       

Kannada Duniya

‘ದಂಗಲ್’ ನೋಡುವಾಗಲೇ ದುರ್ಘಟನೆ

dang

ಮುಂಬೈ: ಚಿತ್ರಮಂದಿರದಲ್ಲಿ ‘ದಂಗಲ್’ ಸಿನಿಮಾ ವೀಕ್ಷಿಸುವಾಗ, ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಲಾಗಿದೆ.

ಮುಂಬೈನ ಗೋರೆಗಾಂವ್ ಉಪನಗರ ಪ್ರದೇಶದಲ್ಲಿರುವ ಚಿತ್ರಮಂದಿರದಲ್ಲಿ ಅಮೀರ್ ಖಾನ್ ಅಭಿನಯದ ‘ದಂಗಲ್’ ಪ್ರದರ್ಶನ ಕಾಣುತ್ತಿದೆ.

ಈ ಚಿತ್ರದಲ್ಲಿನ ದೃಶ್ಯವೊಂದರಲ್ಲಿ ರಾಷ್ಟ್ರಗೀತೆ ಕೇಳಿ ಬರುವಾಗ, 59 ವರ್ಷದ ಅಮಲ್ ರಾಜ್ ದಾಸನ್ ಎದ್ದು ನಿಲ್ಲಲಿಲ್ಲ.

ಇದರಿಂದ ಆಕ್ರೋಶಗೊಂಡ ಶಿರಿಶ್ ಮಧುಕರ್ ಎಂಬಾತ ಹಲ್ಲೆ ಮಾಡಿದ್ದಾನೆ.

ಸಿನಿಮಾದಲ್ಲಿ ಮಹಾವೀರ್ ಪೊಗಟ್ ಪಾತ್ರಧಾರಿಯ ಪುತ್ರಿ ಚಿನ್ನದ ಪದಕ ಗಳಿಸಿದ ಸಂದರ್ಭದಲ್ಲಿ ರಾಷ್ಟ್ರಗೀತೆ ಮೊಳಗುತ್ತದೆ.

ಆಗ ಅಮಲ್ ರಾಜ್ ದಾಸನ್ ಎದ್ದು ನಿಲ್ಲದ ಕಾರಣ, ಶಿರಿಶ್ ಹಲ್ಲೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...