alex Certify
ಕನ್ನಡ ದುನಿಯಾ       Mobile App
       

Kannada Duniya

ಮಿಸ್ ಯೂನಿವರ್ಸ್ ಆಗಲಿದ್ದರಾ ಮುಂಬೈ ಯುವತಿ…?

22 ವರ್ಷದ ಮುಂಬೈ ಬೆಡಗಿ ನೇಹಾಲ್ ಚುದಾಸಮಾ, ಯಮಹಾ ಫಸಿನೋ ಪ್ರಾಯೋಜಿತ ಮಿಸ್ ದಿವಾ ಯೂನಿವರ್ಸ್ 2018ರ ವಿನ್ನರ್ ಆಗಿ ಅಯ್ಕೆಯಾಗಿದ್ದಾರೆ. ಶುಕ್ರವಾರದಂದು ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ 2018ರ ಮಿಸ್ ದಿವಾ ಯೂನಿವರ್ಸ್ ಮುಕುಟವನ್ನು ನೇಹಾಲ್ ಮುಡಿಗೇರಿಸಿಕೊಂಡಿದ್ದಾರೆ. ಇದರಿಂದಾಗಿ ಈ ಬಾರಿಯ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ನೇಹಾಲ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಸ್ಪರ್ಧೆಯಲ್ಲಿದ್ದ ಅದಿತಿ ಹುಂಡಿಯಾ ಮಿಸ್ ಸೂಪರ್ ನ್ಯಾಷನಲ್ ಆಗಿ ಆಯ್ಕೆಯಾದ್ರೆ, ರೋಶಿನಿ ಶೆರೋನ್ ಈ ಸ್ಪರ್ಧೆಯ ರನ್ನರ್ ಅಪ್ ಆಗಿದ್ದಾರೆ. ನೇಹಾಲ್ ಗೆ ಈ ಸ್ಪರ್ಧೆಯಲ್ಲಿ ತಾನು ಗೆಲ್ತೀನಿ ಅನ್ನೋ ನಂಬಿಕೆ ಇತ್ತಂತೆ. ಹಿಂದಿನ ಹಲವು ವೈಫಲ್ಯಗಳ ಹೊರತಾಗಿಯೂ ಅವರಿಗೆ ಈ ಸ್ಪರ್ಧೆಯಲ್ಲಿ ತೀವ್ರ ಪೈಪೋಟಿ ನೀಡ್ತೇನೆ ಅನ್ನೋ ನಂಬಿಕೆ ಇತ್ತಂತೆ.

ಮಗಳ ಸಾಧನೆಗೆ ನೇಹಾಲ್ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಮಿಸ್ ಯೂನಿವರ್ಸ್ ಸ್ಪರ್ಧೆಗೆ ನೇಹಾಲ್ ಈಗಾಗ್ಲೇ ತಯಾರಿ ಆರಂಭಿಸಿದ್ದಾರಂತೆ. ಮಿಸ್ ಯೂನಿವರ್ಸ್ ಕಿರೀಟವನ್ನು ಗೆದ್ದು ತಾಯ್ನಾಡಿಗೆ ಗೌರವ ತರೋದೇ ಅವರ ಕನಸಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...