alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿಯ ನಗ್ನ ವಿಡಿಯೋ ವೈರಲ್ ಮಾಡಿದ್ದ ನಿರ್ಮಾಪಕ ಅರೆಸ್ಟ್

ನಟಿಯ ಅಶ್ಲೀಲ ವಿಡಿಯೋಗಳನ್ನು ಇಂಟರ್ನೆಟ್ ನಲ್ಲಿ ಹರಿಬಿಟ್ಟಿದ್ದ ಭೋಜ್ಪುರಿ ಚಿತ್ರ ನಿರ್ಮಾಪಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು 19 ವರ್ಷದ ಉಪೇಂದ್ರ ಕುಮಾರ್ ವರ್ಮಾ ಎಂದು ಗುರುತಿಸಲಾಗಿದೆ. ಅಂಧೇರಿಯ ಸಲೂನ್ ಒಂದರಲ್ಲಿ ಈತ ಸಿಕ್ಕಿಬಿದ್ದಿದ್ದಾನೆ.

ಈತ ಶಾರ್ಟ್ ಫಿಲ್ಮ್ ಗಳನ್ನು ನಿರ್ಮಾಣ ಮಾಡಿದ್ದ. ಅದರಲ್ಲಿ ಅಭಿನಯಿಸಿದ್ದ ನಟಿಯ ನಗ್ನ ವಿಡಿಯೋವನ್ನು ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ. ಮೊದಲು ಯುಟ್ಯೂಬ್ ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದ. ಅದನ್ನು 1000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರು.

ನಂತರ ಪೋರ್ನ್ ಸೈಟ್ ಗಳಲ್ಲೆಲ್ಲ ಈ ವಿಡಿಯೋ ವೈರಲ್ ಆಗಿತ್ತು. ಕೇವಲ ಮೂರೇ ದಿನಗಳಲ್ಲಿ ಉಪೇಂದ್ರ ಕುಮಾರ್ ಶಾರ್ಟ್ ಫಿಲ್ಮ್ ಚಿತ್ರೀಕರಣ ಮುಗಿಸಿದ್ದ. ಬಾತ್ ರೂಮಿನಿಂದ ನಾಯಕಿ ಟವಲ್ ಉಟ್ಟು ಬರುವ ದೃಶ್ಯವಿತ್ತು. ಚಿತ್ರೀಕರಣದ ವೇಳೆ ಆಕಸ್ಮಿಕವಾಗಿ ನಟಿಯ ಟವಲ್ ಕಳಚಿ ಬಿದ್ದಿತ್ತು.

ಆ ದೃಶ್ಯವನ್ನು ಡಿಲೀಟ್ ಮಾಡುವುದಾಗಿ ಭರವಸೆ ನೀಡಿದ್ದ ಉಪೇಂದ್ರ ಕುಮಾರ್, ಅದನ್ನು ಇಂಟರ್ನೆಟ್ ನಲ್ಲಿ ಹರಿಬಿಟ್ಟಿದ್ದಾನೆ. ಇದು ನಟಿಗೆ ಗೊತ್ತಿರಲಿಲ್ಲ. ಕೆಲ ದಿನಗಳ ಬಳಿಕ ಆಕೆಯ ಸ್ನೇಹಿತೆಯರು ಈ ವೈರಲ್ ವಿಡಿಯೋ ಬಗ್ಗೆ ಮಾಹಿತಿ ನೀಡಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...