alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಭೇಟಿಯಾಗಲು ಗೋಡೆ ಹಾರಿ ಬಂದ್ಲು ಬಾಲಕಿ

ಭೋಪಾಲ್ ಮೂಲದ 15 ವರ್ಷದ ಬಾಲಕಿಯೊಬ್ಬಳು ನಟ ಸಲ್ಮಾನ್ ಖಾನ್ ರನ್ನು ಭೇಟಿ ಮಾಡಲು ಗೋಡೆ ಹಾರಿ ಗ್ಯಾಲಾಕ್ಸಿ ಅಪಾರ್ಟ್ಮೆಂಟ್ ಆವರಣ ಪ್ರವೇಶಿಸಿದ್ದಳು. ಆಕೆಯನ್ನು ವಶಕ್ಕೆ ಪಡೆದ ಪೊಲೀಸರು ದೊಂಗ್ರಿ ಚಿಲ್ಡ್ರನ್ಸ್ ಹೌಸ್ ನಲ್ಲಿಟ್ಟಿದ್ದಾರೆ.

ಸಲ್ಮಾನ್ ಖಾನ್ ಅಂದ್ರೆ ಈಕೆಗೆ ಪಂಚಪ್ರಾಣ. ಒಮ್ಮೆ ನಟನನ್ನು ಭೇಟಿಯಾಗಬೇಕು ಅನ್ನೋ ಆಸೆಯಿಂದ ಭಾನುವಾರ ಬಾಲಕಿ ಮನೆ ಬಿಟ್ಟು ಬಂದಿದ್ದಾಳೆ. ಈಕೆ 9ನೇ ತರಗತಿಯ ವಿದ್ಯಾರ್ಥಿನಿ. ಬೆಳಗ್ಗೆ 11 ಗಂಟೆ ವೇಳೆಗೆ, ಬಾಲಕಿಯೊಬ್ಬಳು ಗೋಡೆ ಏರಿರೋದಾಗಿ ಪೊಲೀಸರಿಗೆ ಮಾಹಿತಿ ಬಂದಿತ್ತು.

ಭಾನುವಾರ ಸಂಜೆಯೇ ಆಕೆ ಭೋಪಾಲ್ ನಿಂದ ಹೊರಟಿದ್ಲು. ಮಗಳು ನಾಪತ್ತೆಯಾಗಿರೋ ಬಗ್ಗೆ ಹೆತ್ತವರು ದೂರು ಸಹ ದಾಖಲಿಸಿದ್ರು. ಮಂಗಳವಾರ ಬೆಳಗ್ಗೆ ಮುಂಬೈಗೆ ಬಂದಿಳಿದ ಬಾಲಕಿ, ನೇರವಾಗಿ ರೈಲು ಏರಿ ಬಾಂದ್ರಾದಲ್ಲಿರೋ ಸಲ್ಲು ನಿವಾಸಕ್ಕೆ ಆಗಮಿಸಿದ್ದಾಳೆ.

ಮೊದಲು ಗೇಟ್ ಮೂಲಕವೇ ಒಳಪ್ರವೇಶಿಸಲು ಮುಂದಾಗಿದ್ದಾಳೆ. ಆದ್ರೆ ಭದ್ರತಾ ಸಿಬ್ಬಂದಿ ಅವಳನ್ನು ಒಳಕ್ಕೆ ಬಿಟ್ಟಿಲ್ಲ. ಆಗ ಪಕ್ಕದ ಕಟ್ಟಡದ ಮೇಲಕ್ಕೆ ತೆರಳಿ ಅಲ್ಲಿಂದ ಗೋಡೆ ಹಾರಿ ಅಪಾರ್ಟ್ಮೆಂಟ್ ಒಳಕ್ಕೆ ಪ್ರವೇಶಿಸಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...