alex Certify
ಕನ್ನಡ ದುನಿಯಾ       Mobile App
       

Kannada Duniya

ಮಿಲ್ಕಿ ಬ್ಯೂಟಿಗೆ ಜೋಡಿಯಾಗ್ತಿದ್ದಾರೆ ಪ್ರಭಾಸ್!

tamanna_prabhas

‘ಸಾಹೂ’ ಚಿತ್ರದ ಟೀಸರ್ ರಿಲೀಸ್ ಆದಾಗಿನಿಂದ್ಲೂ ಪ್ರಭಾಸ್ ಗೆ ನಾಯಕಿ ಯಾರು ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಾನೇ ಇದೆ. ಅನುಷ್ಕಾ ಶೆಟ್ಟಿಯೇ ಪ್ರಭಾಸ್ ಗೆ ಜೋಡಿಯಾಗ್ತಿದ್ದಾರೆ ಅನ್ನೋ ಸುದ್ದಿ ಕೂಡ ಸಿನಿದುನಿಯಾದಲ್ಲಿ ಹರಿದಾಡ್ತಾ ಇದೆ. ಆದ್ರೀಗ ತಮನ್ನಾ ಭಾಟಿಯಾ ಹಾಗೂ ಬಾಹುಬಲಿ ಪ್ರಭಾಸ್ ಮಧ್ಯೆ ಹೊಸ ಸುದ್ದಿಯೊಂದು ಕೇಳಿ ಬಂದಿದೆ.

ತಮನ್ನಾ ಹಾಗೂ ಪ್ರಭುದೇವ ನಟನೆಯ ‘ಖಾಮೋಶಿ’ ಚಿತ್ರದಲ್ಲಿ ಪ್ರಭಾಸ್ ಅತಿಥಿ ಪಾತ್ರವೊಂದನ್ನು ಮಾಡ್ತಿದ್ದಾರಂತೆ. ತಮನ್ನಾ ಹಾಗೂ ಪ್ರಭಾಸ್ ಆತ್ಮೀಯ ಸ್ನೇಹಿತರು. ತಮನ್ನಾಗಾಗಿ ಏನ್ಮಾಡೋಕೂ ರೆಡಿ ಅಂತಾ ಪ್ರಭಾಸ್ ಕೂಡ ಹೇಳಿದ್ದಾರಂತೆ.

ಬಾಹುಬಲಿ ಶೂಟಿಂಗ್ ಸಂದರ್ಭದಲ್ಲಿ ಪ್ರಭಾಸ್, ತಮನ್ನಾ ಬಗ್ಗೆ ತುಂಬಾನೇ ಕೇರ್ ತೆಗೆದುಕೊಂಡಿದ್ರು. ಅವಳಿಗೆ ಇಷ್ಟವಾದ ತಿನಿಸುಗಳನ್ನು ಕಳಿಸೋದ್ರಿಂದ ಹಿಡಿದು,  ಮಿಲ್ಕಿ ಬ್ಯೂಟಿಯ ಕೂದಲು ಕೂಡ ಕೊಂಕದಂತೆ ನೋಡಿಕೊಂಡಿದ್ರು. ಈ ವಿಷಯವನ್ನು ಖುದ್ದು ತಮನ್ನಾ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ರು.

ಖಾಮೋಶಿ ಚಿತ್ರದಲ್ಲಿ ಪ್ರಭಾಸ್ ಪಾತ್ರದ ಬಗ್ಗೆ ನಿರ್ದೇಶಕರು ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಚಿತ್ರೀಕರಣ ಬಹುತೇಕ ಮುಗಿದಿದ್ದು, ರಿಲೀಸ್ ಆದಮೇಲೆ ಥಿಯೇಟರ್ ಗೆ ಬಂದು ನೋಡಿ ಎನ್ನುತ್ತಿದ್ದಾರೆ. ಅದೇನೇ ಆದ್ರೂ ಬಾಹುಬಲಿ ಮೊದಲ ಭಾಗದಲ್ಲಿ ಜೋಡಿಯಾಗಿದ್ದ ತಮನ್ನಾ ಹಾಗೂ ಪ್ರಭಾಸ್ ಮತ್ತೆ ತೆರೆಮೇಲೆ ಜೊತೆಯಾಗಿ ಕಾಣಿಸಿಕೊಳ್ತಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...