alex Certify
ಕನ್ನಡ ದುನಿಯಾ       Mobile App
       

Kannada Duniya

ನಾನೀಗ ಸಂತೋಷವಾಗಿ ಸಾಯಬಲ್ಲೆ ಎಂದ ನಟಿ…! ಕಾರಣವೇನು ಗೊತ್ತಾ…?

ಬಾಲಿವುಡ್ ಬೆಡಗಿ ಮೌನಿ ರಾಯ್ ಈಗ ಸಾಯುವ ಮಾತನ್ನಾಡಿದ್ದಾರೆ. ಆದರೆ ಅವರು ಹಾಗೆಂದಿದ್ದು ಬೇಸರದಿಂದಲ್ಲ, ಸಂತೋಷದಿಂದ. ಹಾಗೆ ಅವರಿಂದ ಸಾಯುವ ಮಾತನ್ನಾಡಿಸಿದ್ದು ಬ್ರಹ್ಮಾಸ್ತ್ರ.

ಅರ್ಥಾತ್, “ಬ್ರಹ್ಮಾಸ್ತ್ರ” ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಜೊತೆ ನಟಿಸಿದ ಬಳಿಕ ಸಿಕ್ಕಾಪಟ್ಟೆ ಖುಷಿಯಾಗಿರುವ ಅವರು, ನಾನಿನ್ನು ಸಂತೋಷದಿಂದ ಸಾಯಬಲ್ಲೆ ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

“ಗೋಲ್ಡ್” ಸಿನಿಮಾ ಮೂಲಕ ಬಾಲಿವುಡ್‍ಗೆ ಪದಾರ್ಪಣೆ ಮಾಡಿದ ಅವರಿಗೆ ಇದೇ ಮೊದಲ ಬಾರಿಗೆ ಬಿಗ್-ಬಿ ಅಮಿತಾಭ್ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ಆ ಬಗ್ಗೆ ಖಾಸಗಿ ಕಾರ್ಯಕ್ರಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.

ಅವರೊಬ್ಬ ಅದ್ಭುತ ನಟ. ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದೇ ನನಗೆ ದೊಡ್ಡ ಅದೃಷ್ಟ. ಚಿತ್ರೀಕರಣ ವೇಳೆ ನಾನು ಅವರ ಕಣ್ಣುಗಳನ್ನು ನೋಡುತ್ತ, ದೇವರು ನನಗೆ ಎಂಥ ಅವಕಾಶ ಕೊಟ್ಟಿದ್ದಾನಲ್ಲ ಅಂತಂದುಕೊಂಡು ಕಳೆದುಹೋಗಿಬಿಡುತ್ತಿದ್ದೆ ಎಂದು ತಮ್ಮ ಭಾವಪರವಶತೆಯನ್ನು ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...