alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಹತ್ಯೆಗೆ ಸ್ಕೆಚ್ ಹಾಕಿದ್ದವನು ಪೊಲೀಸರಿಗೆ ಹೇಳಿದ್ದೇನು? ಇಲ್ಲಿದೆ ಡೀಟೇಲ್ಸ್

ಹರ್ಯಾಣದ ಎಸ್ಟಿಎಫ್ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟಾರ್ ಸಂಪತ್ ನೆಹ್ರಾನನ್ನು ಹೈದ್ರಾಬಾದ್ ನಲ್ಲಿ ಬಂಧಿಸಿದೆ. ಸಿಕ್ಕಿಬಿದ್ದ ಸಂಪತ್ ನೆಹ್ರಾ ದೊಡ್ಡ ಬಾಂಬ್ ಒಂದನ್ನು ಸಿಡಿಸಿದ್ದಾನೆ. ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್ ಹಾಕಿದ್ದೆ ಎಂದು 28 ವರ್ಷದ ಸಂಪತ್ ಬಾಯ್ಬಿಟ್ಟಿದ್ದಾನೆ.

ಪೊಲೀಸ್ ಪ್ರಕಾರ ಸಂಪತ್ ಸಲ್ಮಾನ್ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದನಂತೆ. ಮುಂಬೈಗೆ ಹೋಗಿದ್ದ ಸಂಪತ್, ಸಲ್ಮಾನ್ ಖಾನ್ ಮನೆ ಹಾಗೂ ಬಾಡಿಗಾರ್ಡ್ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದನಂತೆ. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನಲ್ಲಿ ಸಂಪತ್ ಕೆಲಸ ಮಾಡ್ತಿದ್ದ. ಕೃಷ್ಣಮೃಗ ಭೇಟಿ ಪ್ರಕರಣದ ವೇಳೆ ಪಂಜಾಬ್ ಮೂಲದ ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೋಯಿ ಸಲ್ಮಾನ್ ಖಾನ್ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಅಪಾಯಕಾರಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕೂಡ ಸಕ್ರಿಯವಾಗಿದೆ. ಫೇಸ್ಬುಕ್ ಹಾಗೂ ವಾಟ್ಸಾಪ್ ನಲ್ಲಿ ಸಕ್ರಿಯವಾಗಿರುವ ಈ ಗ್ಯಾಂಗ್ ವಿರುದ್ಧ 12ಕ್ಕೂ ಹೆಚ್ಚು ಹತ್ಯೆ, ಹತ್ಯೆ ಯತ್ನ, ಅಪಹರಣದ ಕೇಸ್ ದಾಖಲಾಗಿದೆ.

ನೆಹ್ರಾ ಮುಂದಿನ ಗುರಿ ಸಲ್ಮಾನ್ ಖಾನ್ ಆಗಿದ್ದರಂತೆ. ಸಲ್ಮಾನ್ ಹತ್ಯೆ ಮಾಡಿ ವಿದೇಶಕ್ಕೆ ಹೋಗುವ ಪ್ಲಾನ್ ನೆಹ್ರಾ ಮಾಡಿದ್ದ ಎನ್ನಲಾಗಿದೆ. ಹರ್ಯಾಣ, ಪಂಜಾಬ್, ರಾಜಸ್ತಾನ, ಚಂಡೀಗಢ ಪೊಲೀಸರಿಗೆ ಬೇಕಾಗಿದ್ದ ನೆಹ್ರಾ ತಲೆಗೆ ಪೊಲೀಸರು ಬಹುಮಾನ ಕೂಡ ಘೋಷಣೆ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...