alex Certify
ಕನ್ನಡ ದುನಿಯಾ       Mobile App
       

Kannada Duniya

769 ಕೋಟಿ ರೂ. ನಲ್ಲಿ ನಿರ್ಮಾಣವಾದ ಚಿತ್ರ 3 ದಿನವೂ ಓಡಲಿಲ್ಲ

ಬೌದ್ಧ ಪೌರಾಣಿಕ ಕಥೆ ಆಧರಿತ ಅಸುರಾ ಚಿತ್ರ ಬಿಡುಗಡೆಯಾಗಿದೆ. ಚೀನಾದಲ್ಲಿ ನಿರ್ಮಾಣವಾದ ಚಿತ್ರಗಳಲ್ಲಿ ಇದು ದುಬಾರಿ ಚಿತ್ರ. ಆದ್ರೆ ಗಳಿಕೆ ವಿಚಾರದಲ್ಲಿ ಅಸುರಾ ಹಿಂದೆ ಬಿದ್ದಿದೆ. ಇದನ್ನು ನಿರ್ಮಿಸಲು 11.2 ಕೋಟಿ ಡಾಲರ್ (769 ಕೋಟಿ ರೂ.) ಖರ್ಚು ಮಾಡಲಾಗಿತ್ತು.

ಅಸುರಾ ಚಿತ್ರಕ್ಕಾಗಿ ಇ-ಕಾಮರ್ಸ್ ಕಂಪನಿ ಅಲಿಬಾಬಾ ಕೂಡ ಹಣ ಹೂಡಿಕೆ ಮಾಡಿತ್ತು. ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತೆ ಎನ್ನುವ ನಿರೀಕ್ಷೆ ಸುಳ್ಳಾಗಿದೆ. ಕಳೆದ ಮೂರು ದಿನಗಳಲ್ಲಿ ಚಿತ್ರ 73 ಲಕ್ಷ ಡಾಲರ್ ( ಸುಮಾರು 50 ಕೋಟಿ ರೂ.) ಅಷ್ಟೇ ಗಳಿಕೆ ಕಂಡಿದೆ.

ಅಸುರಾ ಚಿತ್ರವನ್ನು ಬಿಡುಗೆಯಾದ ಮೂರನೇ ದಿನವೇ ಥಿಯೇಟರ್ ನಿಂದ ಎತ್ತಂಗಡಿ ಮಾಡಲಾಗಿದೆ. ಈ ಬಗ್ಗೆ ನಿರ್ಮಾಪಕರು  ಅಧಿಕೃತ ಟ್ವೀಟರ್ ನಲ್ಲಿ ಕ್ಷಮೆ ಕೇಳಿದ್ದಾರೆ. ಚಿತ್ರ ಜನರನ್ನು ಥಿಯೇಟರ್ ಗೆ ಸೆಳೆಯುವಲ್ಲಿ ಯಶಸ್ವಿಯಾಗಲಿಲ್ಲ. ಪ್ರೇಕ್ಷಕರ ಜೊತೆಗೆ ಕಳೆದ 6 ವರ್ಷಗಳಿಂದ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದ ಅಂತರಾಷ್ಟ್ರೀಯ ಕಂಪನಿಗಳ ಕ್ಷಮೆಯಾಚಿಸುತ್ತೇವೆ. ಚಿತ್ರಕ್ಕಾಗಿ 2500 ಜನರು ಕೆಲಸ ಮಾಡಿದ್ದರು. ಅಮೆರಿಕಾದಲ್ಲಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆದಿತ್ತು ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...