alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಂಗಿಕ ಕಿರುಕುಳ ಕೇಸ್ ವಾಪಸ್ ಪಡೆಯಲು ಮುಂದಾದ ಬಾಲನಟಿ

39 ವರ್ಷದ ವ್ಯಕ್ತಿಯೊಬ್ಬನ ಮೇಲೆ ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣವನ್ನು ಹಿಂಪಡೆಯಲು ಬಾಲಿವುಡ್ ನ ಬಾಲನಟಿ ನಿರ್ಧರಿಸಿದ್ದಾಳೆ ಎನ್ನಲಾಗ್ತಿದೆ. ಡಿಸೆಂಬರ್ 9ರಂದು ಏರ್ ವಿಸ್ತಾರಾ ವಿಮಾನದಲ್ಲಿ ಈ ಘಟನೆ ನಡೆದಿತ್ತು.

ವಿಕಾಸ್ ಸಚ್ದೇವ್ ಎಂಬ ಮುಂಬೈನ ಮೂಲದ ಉದ್ಯಮಿ ತನ್ನನ್ನು ಅಸಭ್ಯವಾಗಿ ಸ್ಪರ್ಷಿಸಿದ್ದಾನೆ ಅಂತಾ ನಟಿ ಆರೋಪ ಮಾಡಿದ್ಲು. ವಿಕಾಸ್ ವಿರುದ್ಧ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪೋಕ್ಸೋ ಅಡಿಯಲ್ಲೂ ಕೇಸ್ ಹಾಕಲಾಗಿತ್ತು. ನಂತರ ಮುಂಬೈ ಕೋರ್ಟ್ ಆರೋಪಿ ವಿಕಾಸ್ ಗೆ ಜಾಮೀನು ನೀಡಿತ್ತು.

ಈ ಘಟನೆ ನಡೆದು ಒಂದೂವರೆ ತಿಂಗಳುಗಳೇ ಕಳೆದಿದೆ. ಇದೀಗ ನಟಿ ಆತನನ್ನು ಕ್ಷಮಿಸಲು ಮುಂದಾಗಿದ್ದಾಳೆ ಅಂತಾ ಮೂಲಗಳು ತಿಳಿಸಿವೆ. ಘಟನೆ ಬಳಿಕ ನಟಿ ತೀವ್ರ ಆಘಾತಕ್ಕೆ ಒಳಗಾಗಿದ್ಲು. ಆರೋಪಿಯನ್ನು ಶಿಕ್ಷಿಸುವುದು ಅವಳ ಉದ್ದೇಶವಲ್ಲ. ಬದಲಾಗಿ ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡಲು ನಿರ್ಧರಿಸಿದ್ದಾಳೆ ಅಂತಾ ಆಕೆಯ ಕುಟುಂಬದವರು ತಿಳಿಸಿದ್ದಾರೆ. ಲೈಂಗಿಕ ಕಿರುಕುಳಕ್ಕೆ ಸಂಬಂಧಪಟ್ಟಂತೆ ಇನ್ ಸ್ಟಾಗ್ರಾಮ್ನಲ್ಲಿ ಹಾಕಿದ್ದ ಪೋಸ್ಟ್ ಗಳನ್ನು ಕೂಡ ನಟಿ ಡಿಲೀಟ್ ಮಾಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...