alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಪಾತ್ರದಲ್ಲಿ ಕಾಣಿಸಲಿದ್ದಾರೆ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದ ವ್ಯಕ್ತಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೋಲುವ ವ್ಯಕ್ತಿ ಎಂ.ಪಿ. ರಾಮಚಂದ್ರನ್ ಶೀಘ್ರದಲ್ಲಿಯೇ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಮೋದಿ ಪಾತ್ರವನ್ನು ರಾಮಚಂದ್ರನ್ ನಿಭಾಯಿಸಲಿದ್ದಾರೆ. ಕೇರಳ ನಿವಾಸಿ ರಾಮಚಂದ್ರನ್ ಫೋಟೋ 2017ರಲ್ಲಿ ಇಂಟರ್ನೆಟ್ ನಲ್ಲಿ ವೈರಲ್ ಆಗಿತ್ತು.

64 ವರ್ಷದ ರಾಮಚಂದ್ರನ್ ‘ಸ್ಟೇಟ್ಮೆಂಟ್ 8/11’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನವೆಂಬರ್ 8,2016 ರ ನೋಟು ನಿಷೇಧ ಘಟನೆಯನ್ನು ಈ ಚಿತ್ರ ಆಧರಿಸಿದೆ. ನೋಟು ನಿಷೇಧ ತೀರ್ಮಾನದಿಂದ ಇಡೀ ದೇಶವೇ ತಬ್ಬಿಬ್ಬಾಗಿತ್ತು. ಕಡಿಮೆ ಬಜೆಟ್ ನ ಈ ಚಿತ್ರವನ್ನು ಅಪ್ಪಿ ಪ್ರಸಾದ್ ನಿರ್ದೇಶನ ಮಾಡಿದ್ದಾರೆ.

2017ರಲ್ಲಿ ರಾಮಚಂದ್ರನ್ ಪಯ್ಯನೂರು ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದರು. ವಿದ್ಯಾರ್ಥಿಯೊಬ್ಬ ಅವ್ರ ಫೋಟೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದ. ಪಯ್ಯನೂರು ರೈಲ್ವೆ ನಿಲ್ದಾಣದಲ್ಲಿ ಮೋದಿ ಎಂದು ಶೀರ್ಷಿಕೆ ಹಾಕಿದ್ದ. ಆ ನಂತ್ರ ಪ್ರಸಿದ್ಧಿಗೆ ಬಂದಿದ್ದ ರಾಮಚಂದ್ರನ್ ಅವರನ್ನು ಕನ್ನಡ ಚಾನೆಲ್ ಗಳು ಸಂದರ್ಶನ ಮಾಡಿದ್ದವು. ನಂತ್ರ ಚಿತ್ರಗಳಿಗೆ ಆಫರ್ ಬಂದಿತ್ತು.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿಯೇ ರಾಮಚಂದ್ರನ್ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಏಪ್ರಿಲ್ 27ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದ್ರೆ ತಾಂತ್ರಿಕ ಕಾರಣದಿಂದ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...