alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದಿತ ಪುಟಾಣಿ ಮಾಡೆಲ್ ಈಗ ಹೇಗಾಗಿದ್ದಾಳೆ ಗೊತ್ತಾ?

6 ವರ್ಷದವಳಿದ್ದಾಗ್ಲೇ ವಿವಾದಾತ್ಮಕ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ರೂಪದರ್ಶಿ ಈ ಬಾರಿ ನ್ಯೂಯಾರ್ಕ್ ಫ್ಯಾಷನ್ ವೀಕ್ ನಲ್ಲಿ ಎಲ್ಲರ ಕೇಂದ್ರ ಬಿಂದುವಾಗಿದ್ಲು. ಫ್ರಾನ್ಸ್ ನ ರೂಪದರ್ಶಿ ಥೈಲೇನ್ ಬ್ಲಾಂಡ್ಯುಗೆ ಈಗ 16ರ ಹರೆಯ. ಥೈಲೇನ್ ಮೊದಲ ಬಾರಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದು 4 ವರ್ಷದವಳಿದ್ದಾಗ.

6 ವರ್ಷದವಳಾಗಿದ್ದಾಗ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ಲು. ಆದ್ರೆ ಆಕೆಗೆ ಸೆಕ್ಸೀ ಡ್ರೆಸ್ ತೊಡಿಸಿ ಅತಿಯಾದ ಮೇಕಪ್ ಮಾಡಿದ್ದು ತೀವ್ರ ವಿವಾದ ಎಬ್ಬಿಸಿತ್ತು. ಈ ಬಾರಿ ನ್ಯೂಯಾರ್ಕ್ ಫ್ಯಾಷನ್ ವೀಕ್ ನಲ್ಲಿ ಘಟಾನುಘಟಿ ಮಾಡೆಲ್ ಗಳಿದ್ರೂ ಥೈಲೇನ್ ಎಲ್ಲರ ಗಮನ ಸೆಳೆದಿದ್ದಾಳೆ.

ಡೌಟ್ಝೆನ್ ಕ್ರೋಸ್, ಬಾರ್ಬರಾ ಪಲ್ವಿನ್ ರಂತಹ ಮಾಡೆಲ್ ಗಳು ಕೂಡ ಇವಳ ಮುಂದೆ ಮಂಕಾಗಿದ್ರು. ಹತ್ತಾರು ಆಫರ್ ಗಳು ಥೈಲೇನ್ ಳನ್ನು ಹುಡುಕಿಕೊಂಡು ಬರುತ್ತಿವೆ. ಸಾಮಾಜಿಕ ತಾಣಗಳಲ್ಲೂ ಈಕೆ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದಾಳೆ. ಥೈಲೇನ್ ಗೆ ಇನ್ ಸ್ಟಾಗ್ರಾಮ್ನಲ್ಲಿ 1 ಮಿಲಿಯನ್ ಫಾಲೋವರ್ಗಳಿದ್ದಾರೆ.

ಈ ಬಾರಿ ಕೇನ್ಸ್ ಫೆಸ್ಟಿವಲ್ ನಲ್ಲೂ ಥೈಲೇನ್ ಕಾಣಿಸಿಕೊಂಡಿದ್ಲು. ಮೊದಲ ಬಾರಿಗೆ ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ಲು. ನ್ಯೂಯಾರ್ಕ್ ಫ್ಯಾಷನ್ ವೀಕ್ ನಲ್ಲಿ ಥೈಲೇನ್, ಹುಲಿ ಪಟ್ಟೆ ಡ್ರೆಸ್ ತೊಟ್ಟು ಮಿಂಚಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...